ಬಳ್ಳಾರಿ ನ 30.ಸೀರತ್ ಅಭಿಯಾನ -2025 ಅಂಗವಾಗಿ ಹಮ್ಮಿಕೊಂಡಿದ್ದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ(ಸ) ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಕರೆಯಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಬಳ್ಳಾರಿಯ ಮಹಮದಿಯ ಬಿ.ಇಡಿ ಕಾಲೇಜಿನಲ್ಲಿ ಇಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಆಯಿಷಾ ಸಾಹೇಬಾ ಅವರು ಕಾರ್ಯಕ್ರಮ ಕುರಿತಾಗಿ ಮಾತನಾಡುತ್ತಾ ಮುಹಮ್ಮದ್ ಪೈಗಂಬರ್ ಅವರ ಜೀವನ ಸರ್ವಕಾಲಕ್ಕೂ ಆದರ್ಶಯುತವಾಗಿದೆ. ನೊಂದವರ, ಶೋಷಿತರ, ದುಃಖಿತರ ಪರವಾಗಿ ಮುಹಮ್ಮದ್ ಪೈಗಂಬರ್ ಅವರು ಚಿಂತಿಸಿ ಅವರ ದುಃಖಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಲೋಚಿಸಿದರು ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ ಭಾವೈಕ್ಯತೆಯಿಂದ ಬಾಳಲು ಪರಸ್ಪರ ಧರ್ಮಗಳ ತಿಳುವಳಿಕೆ ಅವಶ್ಯಕವೆಂದರು.
ಮತ್ತೋರ್ವ ಮುಖ್ಯ ಅತಿಥಿಯಾದ ಮೊಹಮದೀಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೈಮುದಾ ಬೇಗಂ ಮಾತನಾಡಿ ಪೈಗಂಬರ್ ಅವರು ಮಾನವ ಹಕ್ಕುಗಳ ಮತ್ತು ಕಾನೂನುಗಳ ಪರಿಪಾಲಕರಾಗಿದ್ದಾರೆಂದು ತಿಳಿಸಿದರು.
ಸೀರತ್ ಅಭಿಯಾನ ಸ್ಪರ್ಧೆಯಲ್ಲಿ ಶ್ರೀಮತಿ ಸರಿತಾ ಹೆಚ್.ಜೆ ಮುಖ್ಯೋಪಾಧ್ಯಾಯರು ನಂದ ವಸತಿ ಶಾಲೆ ಬಳ್ಳಾರಿ ಇವರು ರೂಂ.15,000/- ಗಳ ಪ್ರಥಮ ಬಹುಮಾನ, ಶ್ರೀಮತಿ ಶೀತಲ್ ಬೇಕ್ವಾಡಕರ್ ಸಂಶೋಧನಾ ವಿದ್ಯಾರ್ಥಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ರೂ. 10,000/-ಗಳ ದ್ವಿತೀಯ ಬಹುಮಾನ, ಶ್ರೀಮತಿ ರೂಪಾ ವಿ ಶಿಕ್ಷಕರು ಶ್ರೀ ವಿವೇಕಾನಂದ ಪ್ರೌಢಶಾಲೆ ಸಂಡೂರು ಇವರು ರೂ. 5,000/- ತೃತೀಯ ಬಹುಮಾನ ಪಡೆದರು.
ರೂ. 2,000/- ಗಳ 5 ಸಮಾಧಾನಕರ ಬಹುಮಾನ ಸೇವಂತಿಕಾ ಬಿ.ಎಲ್. ಬಿ.ಪಿ.ಎಸ್.ಸಿ ಕಾಲೇಜು, ಬಿ.ಆರ್. ಶಿವಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿಗೇರಿ, ಪ್ರತಿಮಾ ಪಿ ಶ್ರೀ ವಿವೇಕಾನಂದ ಪ್ರೌಢಶಾಲೆ ಸಂಡೂರು, ಬಸವರಾಜೇಶ್ವರಿ ಜೆ ಎಸ್ ಶ್ರೀ ವಾಸವಿ ವಿದ್ಯಾಲಯ ಬಳ್ಳಾರಿ, ಶ್ರೀದೇವಿ ಸಂಶೋಧನಾ ವಿದ್ಯಾರ್ಥಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರುಗಳಿಗೆ ನಗದು ಸಮೇತ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಹಮದೀಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೊಹಮ್ಮದ್ ಇದ್ರೀಸ್ ಉಮ್ಮಾರಿ, ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಇಬ್ರಾಹಿಂ ಬಾಬು, ಜಮಾತೆ ಇಸ್ಲಾಮಿ ಹಿಂದ್ ನ ಜಿಲ್ಲಾ ಸಂಚಾಲಕರಾದ ಸೈಯದ್ ಜೈನುಲಾಬೀದಿನ್ ಖಾದ್ರಿ, ಶ್ರೀಮತಿ ಮಹಜಬಿನ್ ಜಿಲ್ಲಾ ಸಂಚಾಲಕರು ಮಹಿಳಾ ವಿಭಾಗ ಮತ್ತು ಸೈಯದ್ ನಿಜಾಮುದ್ದೀನ್,ಬಳ್ಳಾರಿ ಘಟಕದ ಅಧ್ಯಕ್ಷರು, ಶ್ರೀಮತಿ ನೂರ್ ಜಹಾನ್ ಕಾರ್ಯದರ್ಶಿ ಮಹಿಳಾ ವಿಭಾಗ ಶ್ರೀಮತಿ ಜವೆರಿಯ ಅಧ್ಯಕ್ಷರು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೈಯದ್ ಮಿಸ್ಬಾಹುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.


