ಅಖಂಡ ಬಳ್ಳಾರಿ ಅಭಿವೃದ್ಧಿಯತ್ತ ಸಾಗುತ್ತಿದೆ: ಸಂಸದ ಈ.ತುಕಾರಾಮ್

Ravi Talawar
ಅಖಂಡ ಬಳ್ಳಾರಿ ಅಭಿವೃದ್ಧಿಯತ್ತ ಸಾಗುತ್ತಿದೆ: ಸಂಸದ ಈ.ತುಕಾರಾಮ್
WhatsApp Group Join Now
Telegram Group Join Now



ಬಳ್ಳಾರಿ,ನ.28 ನಗರದ ಹೊರವಲಯದ ಹೊಸ ಬೈಪಾಸ್ ನ ವೇಣಿವೀರಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್‌ಹೆಚ್-67) ಯೋಜನೆಯಡಿ ವೇಣಿವೀರಾಪುರ ದಿಂದ ಹಗರಿ ವರೆಗೆ ನಿರ್ಮಿಸಲಾದ ಬಳ್ಳಾರಿ ಬೈಪಾಸ್ ರಸ್ತೆಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಹೊಸಪೇಟೆಯಿಂದ ಆಂಧ್ರ-ಕರ್ನಾಟಕ ಗಡಿಭಾಗದ ವರೆಗೆ ಒಟ್ಟು 95.370 ಕಿ.ಮೀ ಉದ್ದದ ರಾಷ್ಟಿçÃಯ ಹೆದ್ದಾರಿ ರಸ್ತೆ ಇದಾಗಿದ್ದು, 830.28 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಈಗಾಗಲೇ ಶೇ.78 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹೊಸಪೇಟೆ ಭಾಗದ ಭುವನಹಳ್ಳಿ, ವಡ್ಡರಹಳ್ಳಿ, ಗಾದಿಗನೂರು ಭಾಗದಲ್ಲಿ ಕಾಮಗಾರಿ ಇನ್ನು ಬಾಕಿ ಇದೆ, ಅದರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯೂ ಒಳಗೊಂಡಿದೆ ಎಂದು ಹೇಳಿದರು.
ನಗರದ ಸುಧಾಕ್ರಾಸ್ ಬಳಿಯ ಈಗಾಗಲೇ ಇದ್ದ ಅವೈಜ್ಞಾನಿಕ ಬೈಪಾಸ್ ರಸ್ತೆಯಿಂದ ಬಾರಿ ಗಾತ್ರದ ವಾಹನಗಳು ಸಂಚರಿಸುತ್ತಿದ್ದವು. ಇದರಿಂದ ಸಾರ್ವಜನಿಕರು ಸಂಚರಿಸಲು ಅಡಚಣೆ ಉಂಟಾಗುತ್ತಿತ್ತು. ಸುಮಾರು 25 ಕಿ.ಮೀ ಉದ್ದದ ಈ ಹೊಸ ಬೈಪಾಸ್ ರಸ್ತೆಯು ಆರಂಭಗೊಳ್ಳುವುದರಿAದ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಮೊದಲು ಜಿಲ್ಲೆಯ ರಸ್ತೆಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.
ಅದೇರೀತಿಯಾಗಿ ನಗರದ ಹೊಸ ಬೈಪಾಸ್ ರಸ್ತೆಯಿಂದ ಸುಧಾಕ್ರಾಸ್ ಮೂಲಕ ಕೌಲ್ ಬಜಾರ್ ವರೆಗೆ 4ಲೇನ್ ರಸ್ತೆ ಮಾಡಲು ಈಗಾಗಲೇ ಡಿಪಿಆರ್ ಸಿದ್ದಗೊಳ್ಳುತ್ತಿದೆ. ಸುಂದರವಾದ ರಸ್ತೆ ನಿರ್ಮಾಣ ಮಾಡಲಾಗುವುದು ಮತ್ತು ಸುಧಾಕ್ರಾಸ್ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಆರಂಭಗೊAಡು ಪ್ರಗತಿಯಲ್ಲಿದೆ. ದುರ್ಗಮ್ಮ ಗುಡಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೈಲ್ವೇ ಇಲಾಖೆಗೆ ಈಗಾಗಲೇ 09 ಕೋಟಿ ರೂ. ನೀಡಿದ್ದು, ಈ ಕುರಿತು ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿಯಿಂದ ವೇಣಿ ವೀರಾಪುರ ಮೂಲಕ ಸಿರುಗುಪ್ಪ ರಸ್ತೆಗೆ ರಿಂಗ್ ರೋಡ್ ಮಾಡಲು ಡಿಪಿಆರ್ ಸಿದ್ಧಗೊಳ್ಳುತ್ತಿದೆ. 230 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆಯಾಗಿ ಬಳ್ಳಾರಿಯಲ್ಲಿ ಪೂರ್ಣ ರಿಂಗ್ ರೋಡ್ ಮೂಲಕ ಅಖಂಡ ಬಳ್ಳಾರಿಯನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಕುಡತಿನಿ, ವೇಣಿವೀರಾಪುರ ಭಾಗದಲ್ಲಿ ಉದ್ಯಮ ಸ್ಥಾಪಿಸಲು ರೈತರಿಂದ ವಶಪಡಿಸಿಕೊಂಡ ಸುಮಾರು 2,659 ಎಕರೆ ಭೂಮಿಯಲ್ಲಿ ರ‍್ಸೆಲ್ಲರ್ ಮಿತ್ತಲ್, ಎನ್‌ಎಂಡಿಸಿ ಮತ್ತು ಉತ್ತಮ್ ಗಾಲ್ವಾ ಕಂಪನಿಗಳು ಉದ್ಯಮ ಸ್ಥಾಪಿಸುವುದಿಲ್ಲ, ಭೂಮಿಯನ್ನು ಮರಳಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಎನ್‌ಎಂಡಿಸಿ ಕಂಪನಿಯು ಡಿಸೆಂಬರ್ ಅಂತ್ಯಕ್ಕೆ ನೂತನ ಕೈಗಾರಿಕೆ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ತಿಳಿಸಿದ್ದಾರೆ ಮತ್ತು ಉತ್ತಮ್ ಗಾಲ್ವಾ ಕಂಪನಿಯು ಮಾರ್ಚ್ ತಿಂಗಳಲ್ಲಿ ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಲು 36,000 ಕೋಟಿ ರೂ. ಇನ್‌ವೆಸ್ಟ್ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಚರ್ಚೆಗಳು ಇತ್ತೀಚೆಗೆ ಮುಖ್ಯಮಂತ್ರಿಯವರೊAದಿಗೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದರು.
ಎನ್‌ಎAಡಿಸಿ ಕಂಪನಿಯಲ್ಲಿ ಸರೋಜಿನಿ ಮಹಿಷಿ ವರದಿ ಆಳವಡಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಕೇಂದ್ರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡಲಾಗಿದೆ ಎಂದರು.
ಬಳಿಕ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ 2024-25ನೇ ಸಾಲಿನ ಸಂಸದರ 10 ಲಕ್ಷ ರೂ. ಅನುದಾನದಲ್ಲಿ ಬಸ್ ತಂಗುದಾಣದ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಗಾಗಿ 2000 ಲೀ. ಸಾಮರ್ಥ್ಯದ ಕುಡಿಯುವ ನೀರಿನ ಆರ್‌ಓ ಘಟಕ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಆನಂದ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು-ಗುತ್ತಿಗೆದಾರರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

WhatsApp Group Join Now
Telegram Group Join Now
Share This Article