ನವದೆಹಲಿ: OTT ಪ್ಲಾಟ್ಫಾರ್ಮ್ಗಳಿಂದ ಜನರು ಅದರಲ್ಲೂ ಮಕ್ಕಳು ತುಂಬಾ ಆಳಾಗುತ್ತಿದ್ದಾರೆ ಎನ್ನುವ ಆರೋಪ ಅವಾಗವಾಗ ಕೇಳಿ ಬರುತ್ತಿರುತ್ತದೆ. ಇಂತಹ ಆರೋಪಗಳ ನಡುವೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯು OTT ಪ್ಲಾಟ್ಫಾರ್ಮ್ಗಳಿಗೆ ಅಂಕುಶ ಹಾಕುವುದಕ್ಕೆ ಮುಂದಾಗಿದ್ದೇಯಾ ಎನ್ನುವ ಅನುಮಾನ ಮೂಡುತ್ತಿದೆ! ಅದಕ್ಕೆ ಕಾರಣ ನೆಟ್‌ಫ್ಲಿಕ್ಸ್ ಹಾಗೂ ಯೂಟ್ಯೂಬ್ ನೋಡಬೇಕು ಅಂದ್ರೆ ಆಧಾರ್ ಕಾರ್ಡ್ ಇರಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ಸುಪ್ರೀಂ ಸೂಚನೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ಅಶ್ಲೀಲ ಹಾಗೂ 18+ ವಿಷಯಗಳನ್ನು ಮಕ್ಕಳಿಂದ ದೂರವಿಡಲು ನೆಟ್‌ಫ್ಲಿಕ್ಸ್, ಯೂಟ್ಯೂಬ್‌ನಂತಹ ಒಟಿಟಿ ವೇದಿಕೆಗಳಲ್ಲಿ ಆಧಾರ್ ಆಧಾರಿತ ವಯಸ್ಸು ಪರಿಶೀಲನೆ ಕಡ್ಡಾಯಗೊಳಿಸುವ ಸಲಹೆ ನೀಡಿದೆ.
ಸುಪ್ರೀಂ ಕೋರ್ಟ್ ಏಕೆ ಆಧಾರ್ ಪರಿಶೀಲನೆ ಸಲಹೆ ನೀಡಿತು
\ಮುಂದುವರೆದು, ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ್, “ಕೇವಲ ಎಚ್ಚರಿಕೆ ಸಂದೇಶ ತೋರಿಸಿ ಮುಂದೆ ಸ್ಕಿಪ್ ಮಾಡುವುದು ಸಾಲದು. ಎಚ್ಚರಿಕೆ ಕಾಣಿಸಿಕೊಂಡು ಕೆಲವೇ ಸೆಕೆಂಡ್‌ಗಳಲ್ಲಿ ವಿಷಯ ಶುರುವಾಗುತ್ತದೆ. ಆದ್ದರಿಂದ 18+ ವಿಷಯ ನೋಡಲು ಆಧಾರ್ ಕಾರ್ಡ್ ಮೂಲಕ ವಯಸ್ಸು ಪರಿಶೀಲಿಸುವ ವ್ಯವಸ್ಥೆ ತರಬೇಕು ಎಂದು ಸಲಹೆ ನೀಡಿದರು. ಜೊತೆಗೆ ಇದನ್ನು ಮೊದಲು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತಂದು ಪರೀಕ್ಷಿಸಬಹುದು ಎಂದೂ ಅಭಿಪ್ರಾಯಪಟ್ಟರು.


