ಮೈಸೂರು: ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳಾದವು, ಆದರೂ ಈ ಜನರು ತಮ್ಮ ಹಕ್ಕಿಗಾಗಿ ಬೀದಿಗಿಳಿದಿದ್ದು ನಿಜಕ್ಕೂ ವಿಷಾದನೀಯ. ನಿನ್ನೆ ಸಂವಿಧಾನ ದಿನವನ್ನು ಮಾಡಿದರೂ ಮೂಲಭೂತ ಹಕ್ಕಾದ ವಸತಿಯ ಹಕ್ಕನ್ನೇ ಈ ಜನರಿಂದ ಕಿತ್ತುಕೊಳ್ಳುವ ಭರದಲ್ಲಿದೆಯಲ್ಲಾ ಸರ್ಕಾರ? ಇದೇ ಅಲ್ವಾ ಐರನಿ? ಇದೇ ಅಲ್ವಾ ವ್ಯವಸ್ಥೆಯ (System) ಡಾಂಭಿಕತೆ?!
ಮುಳುಗಡೆ ಸಂತ್ರಸ್ತರ ಗೋಳಿದು, ಹೇಳತೀರದು
ಹೌದು, ಹೆಚ್.ಡಿ. ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮದ ಮುಳುಗಡೆ ನಿರಾಶ್ರಿತರ ಅಳಲು ಇದು. ಸರ್ಕಾರದ ಆದೇಶದ ಅನ್ವಯ ನಮ್ಮ ಭೂಮಿಯನ್ನು ನಾವು ಪಡೆದೇ ತೀರುತ್ತೇವೆ ಎಂದು ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಡೀ ಗ್ರಾಮವೇ ಮುಂದಾಗಿದೆ.
1969 ರಲ್ಲಿ ಹೆಚ್.ಡಿ. ಕೋಟೆಯಲ್ಲಿ ಕಬಿನಿ ಜಲಾಶಯ ನಿರ್ಮಾಣದ ವೇಳೆಯಲ್ಲಿ ಮಳಲಿ ಗ್ರಾಮ ಜಲಾಶಯದ ಹಿನ್ನೀರಿಗೆ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಆ ಸಮಯದಲ್ಲಿ ಮಳಲಿ ಗ್ರಾಮದಲ್ಲಿ ಇದ್ದ ಸುಮಾರು 400 ದಲಿತ ಕುಟುಂಬಗಳನ್ನು ಅಂದಿನ ಸರ್ಕಾರ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು.


