ಸಂಚಾರ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಬಳಸಿಕೊಳ್ಳಿ: ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ

Ravi Talawar
ಸಂಚಾರ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಬಳಸಿಕೊಳ್ಳಿ: ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ
WhatsApp Group Join Now
Telegram Group Join Now
ಧಾರವಾಡ : ರಾಜ್ಯ ಸರ್ಕಾರವು ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಕುರಿತ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ, ಅಧಿಸೂಚನೆ ಹೊರಡಿಸಿದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಕ್ಕೆ  ಸಾರ್ವಜನಿಕರು, ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಿಗೆ ಪೆÇಲೀಸ್ ಇಲಾಖೆಯ ಸಂಚಾರಿ ಈ ಚಲನಗಳಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ ಅವರು ಹೇಳಿದರು.
  ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಇಲಾಖೆಯ ವಿವಿಧ ವಿಷಯಗಳ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರವು ಪೆÇಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಿನಾಂಕ: 11/02/2023ರ ಒಳಗಾಗಿ  ದಾಖಲಾಗಿರುವ ಪ್ರಕರಣಗಳಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2020 ರವರೆಗೆ ದಾಖಲಾದ ಪ್ರಕರಣಗಳಲ್ಲಿ ಶೇ.50 ರಷ್ಟು ವಿನಾಯಿತಿಯನ್ನು ನೀಡಿದೆ. ಸಂಬಂಧಪಟ್ಟ ವಾಹನದ ಮಾಲೀಕರು  ನವೆಂಬರ್ 21 ರಿಂದ 2025 ರಿಂದ ಡಿಸೆಂಬರ್ 12, 2025 ರವರೆಗೆ ದಂಡವನ್ನು ಭರಣ ಮಾಡಿ ಸದರಿ ಸದಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು  ಹೇಳಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು 3,051 ಪ್ರಕರಣ, ಬೆಳಗಾವಿ ವಿಭಾಗದಲ್ಲಿ ಒಟ್ಟು 11,557 ಪ್ರಕರಣ, ಗುಲ್ಬರ್ಗ ವಿಭಾಗದಲ್ಲಿ ಒಟ್ಟು 7,473 ಪ್ರಕರಣಗಳು ಇದ್ದು ಸಾರ್ವಜನಿಕರು 50 ರಷ್ಟು ವಿನಾಯಿತಿಯನ್ನುಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಪಾಂಡಿಚರಿ ನೋಂದಣಿಯ ಹೊಂದಿದ್ದ 12ರಿಂದ 15 ವಾಹನಗಳನ್ನು ಜಪ್ತಿ ಮಾಡಲಾಗಿದೆ ಅವುಗಳಿಂದ ಒಟ್ಟು 1.50 ಕೋಟಿ ದಂಡದ  ಹಣ ಸಂಗ್ರಹವಾಗಿದೆ.
ಶಾಲಾ ವಾಹನಗಳಲ್ಲಿ ನಿಯಮಾನುಸಾರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಹೋಗಿದ್ದರಿಂದ ಜನವರಿ 2025 ರಿಂದ ಅಕ್ಟೋಬರ್ 2025 ಅಂತ್ಯದವರೆಗೆ 3902 ಪ್ರಕರಣಗಳು ದಾಖಲು ಆಗಿವೆ. ಆದ್ದರಿಂದ ಕಾನೂನುಬಾಹಿರವಾಗಿ ಶಾಲಾ ವಾಹನಗಳನ್ನು ಓಡಿಸಬಾರದು, ಸರ್ಕಾರದ ನಿಯಮಾನುಸಾರ ಓಡಿಸಿಸಬೇಕು ಎಂದು ಹೇಳಿದರು.
ಟೆಲರ್ ಗಾಡಿಗಳಿಗೆ ರಿಪ್ಲಕ್ಷನ್ ಅಳವಡಿಸುವುದಕೋಸ್ಕರ ರಿಪ್ಲಕ್ಷನ್ ಬಟ್ಟೆ ಬ್ಯಾನರ್ ಅನ್ನು ಬಿಡುಗಡೆ ಮಾಡಿದರು. ಕಬ್ಬಿನ ಗಾಡಿ ವಾಹನ ಹಿಂಬದಿಯಲ್ಲಿ ಟೆಲರ್‍ಳಿಗೆ ಯಾವುದೇ ರೀತಿ  ರಿಪ್ಲಕ್ಷನ್ ಇರುವುದಿಲ್ಲ ಆದ ಕಾರಣ ಟ್ಯಾಕ್ಟರ್ ಗಳ ಹಿಂಬದಿಯಲ್ಲಿ ಎಲ್ಲರೂ  ರಿಪ್ರಕ್ಷನ್ ಗಳನ್ನು  ಅಳವಡಿಸಬೇಕು ಹಾಗೂ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮೊಟಾರುವಾಹನ ನಿರಿಕ್ಷಕ ಮಠಪತಿ, ಪ್ರಥಮ ದರ್ಜೆ ಸಹಾಯಕ ದಿನಮನಿ ಟಿ.ವಿ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article