ಧಾರವಾಡ: ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಂಡು,ಆರೋಗ್ಯವಂತರಾಗಿರುತ್ತಾರೆ. ಪ್ರತಿನಿತ್ಯ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಖ್ಯಾತ ವೈದ್ಯ ಡಾ.ಸುಧೀರ ಜಂಬಗಿ ಹೇಳಿದರು.
ರಾಜೀವಗಾಂಧಿ CBSE
(ಸಿಬಿಎಸ ಇ )ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲಾ. ಆಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂದರು.
ಮಾಜಿಮಹಾಪೌರರು ಹಾಗೂ ಸಭಾನಾಯಕರಾದ ಈರೇಶ ಅಂಚಟಗೇರಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳು ಕಠಿಣ ಪರಿಶ್ರಮದಿಂದ ಹೆಚ್ಚಿನ ಸಾಧನೆಗೈದು ಒಲಿಂಪಿಕ್ಸನಲ್ಲಿ ಪದಕಗಳಿಸಿ ದೇಶದ ಗೌರವವನ್ನ ಹೆಚ್ಚಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಮಸ್ತ ಕ್ರೀಡಾಪಟುಗಳಿಗೆ ಶುಭಾಷಯಗಳು ಎಂದರು.
ಈ ಸಂದರ್ಭದಲ್ಲಿ ರಾಘವೇದ್ರ ತವನಪ್ಪನವರ ,ಬಸವರಾಜ ತಾಳಿಕೋಟಿ ,ಬಸವರಾಜ ವಸ್ತ್ರದ, ಜಿ ಜಿ ಹಿರೆಮಠ ,ಎಸ ರಾಧಾಕೃಷ್ಣನ್, ಹೇಮಂತ ಅಂಗಡಿ, ವೀಣಾ ತುಪ್ಪದ ,ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.


