ಧಾರವಾಡ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್‍ಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು, ಬಸ್ ತಡೆದು ಹೋರಾಟ ಮಾಡುತ್ತಿರುವದು ಗಮನಕ್ಕೆ ಬಂದಿದೆ ಆದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಧಾರವಾಡ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ ಅವರು ಹೇಳಿದರು.
ಧಾರವಾಡ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ಜರುಗಿಸಿ, ಮಾತನಾಡಿದರು.ಗೃಹಲಕ್ಷ್ಮಿ ಫಲಾನುಭವಿಗಳು ನಿಧನರಾದ ನಂತರ ಗೃಹಲಕ್ಷ್ಮಿ ಹಣ ಜಮೆಯಾದರೆ ಅಂತವರನ್ನು ಗುರುತಿಸಿ, ಮರಳಿ ಸರಕಾರಕ್ಕೆ ಹಣವನ್ನು ನೀಡುವಂತೆ ಅವರಿಗೆ ತಿಳುವಳಿಕೆಯನ್ನು ನೀಡಬೇಕು ಎಂದು ಹೇಳಿದರು.
ಐಟಿ, ಜಿಎಸ್‍ಟಿ.ಯ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡಗಳನ್ನು ಎಪಿಎಲ್ ಕಾರ್ಡಗಳಿಗೆ ಬದಲಾಯಿಸುತ್ತಿರುವ ಸಂದರ್ಭದಲ್ಲಿ ಅರ್ಹರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ವಿತರಣೆ ಮಾಡುತ್ತಿಲ್ಲ, ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಪೌಷ್ಟಿಕ ಆಹಾರಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ದೂರುಗಳು ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕು ಎಂದು ಹೇಳಿದರು.
*ಶಕ್ತಿ ಯೋಜನೆ:* ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಹರ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯಡಿ ಒಟ್ಟು ಮಹಿಳಾ ಪ್ರಯಾಣಿಕರು ಸೆಪ್ಟಂಬರ್-2025ನೇ ತಿಂಗಳಲ್ಲಿ ಒಟ್ಟು 41,98,219 ರಷ್ಟು ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಂದ ರೂ,6,67,9248 ಗಳಷ್ಟು ಆದಾಯವಾಗಿರುತ್ತದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯಡಿ ಒಟ್ಟು ಮಹಿಳಾ ಪ್ರಯಾಣಿಕರು ನವೆಂಬರ್-2025 ನೇ ತಿಂಗಳಲ್ಲಿ ಒಟ್ಟು 5,04,027 ರಷ್ಟು ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಂದ ರೂ.1,66,82,966 ಗಳಷ್ಟು ಆದಾಯವಾಗಿರುತ್ತದೆ.
*ಗೃಹ ಲಕ್ಷ್ಮೀ ಯೋಜನೆ:* ಗ್ರಾಮೀಣ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಇಂಧೀಕರಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ 53,543, ಯೋಜನೆಗೆ ಒಳಪಟ್ಟ ಫಲಾನುಭವಿಗಳ ಸಂಖ್ಯೆ 53,391 ಇದ್ದು, ಈ ಎಲ್ಲ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಫಲಾನುಭವಿಗಳಿಗೆ ಇಲ್ಲಿಯವರೆಗೆ 2,34,92,04,000 ಗಳಷ್ಟು ಹಣ ಸಂದಾಯವಾಗಿರುತ್ತದೆ.
ಶಹರ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಇಂಧೀಕರಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ 27,020 ಒಟ್ಟು ಗೃಹ ಲಕ್ಷ್ಮೀ ಯೋಜನೆಗೆ ಒಳಪಟ್ಟ ಫಲಾನುಭವಿಗಳ ಸಂಖ್ಯೆ 27,020 ಅದರಂತೆ ಫಲಾನುಭವಿಗಳಿಗೆ ಇಲ್ಲಿಯವರೆಗೆ 1,18,88,80,000 ಗಳಷ್ಟು ಹಣ ಸಂದಾಯವಾಗಿರುತ್ತದೆ.
*ಅನ್ನಭಾಗ್ಯ ಯೋಜನೆ:* ಧಾರವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಟ್ಟು ಪಡಿತರ ಚೀಟಿಗಳ ಸಂಖ್ಯೆ 52,333 ಇದ್ದು, ಒಟ್ಟು 70 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು ಹಾಗೂ ಈ ತಿಂಗಳ ಹೊಸ ಪಡಿತರ ಚೀಟಿಗೆ ಅರ್ಜಿಗಳು ಸಂಖ್ಯೆ 1,603 ಇದ್ದು ಪರಿಶೀಲನಾ ಹಂತದಲ್ಲಿ ಬಾಕಿ ಇರುತ್ತದೆ.
ಶಹರ ವ್ಯಾಪ್ತಿಯಲ್ಲಿ ಒಟ್ಟು ನ್ಯಾಯಬೆಲೆ ಅಂಗಡಿಗಳ ಸಂಖ್ಯೆ 32 ಇದ್ದು, ನವೆಂಬರ್ 2025 ರಲ್ಲಿ ಎಎವೈ ಪಡಿತರ ಚೀಟಿಯ 1, 2 ಮತ್ತು 3 ಸದಸ್ಯರಿರುವ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಹಾಗೂ 3 ಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಪಿಎಚ್‍ಎಚ್ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಎನ್‍ಎಪ್‍ಎಸ್‍ಎ 05 ಕೆಜಿ ಅಕ್ಕಿ ಹಾಗೂ ಅನ್ನಭಾಗ್ಯ 05 ಕೆಜಿ ಅಕ್ಕಿಯಂತೆ ಪ್ರತಿ ಸದಸ್ಯರಿಗೆ 10 ಕೆಜೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
*ಗೃಹಜ್ಯೋತಿ ಯೋಜನೆ:* ಧಾರವಾಡ ಶಹರ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ 32,088, ಯೋಜನೆಗೆ ಒಳಪಡುವ ಫಲಾನುಭವಿಗಳ ಸಂಖ್ಯೆ 28,620 ಇದ್ದು, ಇಲ್ಲಿಯವರೆಗೆ ರೂ.3,376.12 ಲಕ್ಷಗಳಷ್ಟು ಖರ್ಚಾಗಿರುತ್ತದೆ.
ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು ಗೃಹ ಗೃಹ ಜ್ಯೋತಿ ಬಳಕೆದಾರರ ಅರ್ಹಫಲಾನುಭವಿಗಳ ಸಂಖ್ಯೆ 55,326, ಯೋಜನೆಗೆ ಒಳಪಡುವ ಫಲಾನುಭವಿಗಳ ಸಂಖ್ಯೆ 51,570 ಇದ್ದು ,ಇಲ್ಲಿಯವರೆಗೆ 4,292.99 ಲಕ್ಷಗಳಷ್ಟು ಖರ್ಚಾಗಿರುತ್ತದೆ.
*ಯುವನಿಧಿ ಯೋಜನೆ:* ಯುವ ನಿಧಿ ಯೋಜನೆಯಡಿಯಲ್ಲಿ ಒಟ್ಟು 3,206 ನೋಂದಣಿಯಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಸಂದಾಯವಾದ ವೆಚ್ಚ ರೂ. 6,46,35,000, ಡಿಪೆÇ್ಲೀಮಾ ವಿದ್ಯಾರ್ಥಿಗಳಿಗೆ ಸಂದಾಯವಾದ ವೆಚ್ಚ 5,89,500. ಒಟ್ಟು ವಿದ್ಯಾರ್ಥಿಗಳಿಗೆ ನೀಡಲಾದ ಮೊತ್ತ ರೂ, 6,52,24,500 ನೀಡಲಾಗಿದೆ.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಕದಂ, ಪರಮೇಶ್ವರ ಕರಿಕಟ್ಟಿ, ಮಂಜುನಾಥ ಉಡಿಕೇರಿ, ಮಿಲಿಂದ ಇಚಂಗಿ, ರಾಜೇಶ ಚವ್ಹಾಣ, ಸಿದ್ದಪ್ಪ ಅಗಸಿಮನಿ, ಕಲಾವತಿ ಭೀಮಕ್ಕನವರ, ರೇಣುಕಾ ಕಳ್ಳಿಮನಿ, ಮೈಲಾರಗೌಡ ಪಾಟೀಲ, ಕಾರ್ತಿಕ ಗೋಕಾಕ, ಪರಮೇಶ್ವರ ಕಾಳೆ, ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹಾಗೂ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


