ಸಂಕೇಶ್ವರ : ಪುರಸಭೆ ಕಚೇರಿಯಲ್ಲಿ, ಉಪ ತಹಶೀಲ್ದಾರ್ ಕಚೇರಿ, ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.ದಲಿತ ಮುಖಂಡರಾದ ದಿಲೀಪ ಹೊಸಮನಿ ಮಾತನಾಡಿ, ಭಾರತದ ಸಂವಿಧಾನವುಸರ್ವರಿಗೂ ಸಮಾನತೆ ಒದಗಿಸಿದ್ದು ಮೂಲಭೂತ ಹಕ್ಕುಗಳನ್ನು ನೀಡಿದ್ದು, ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ಶಿವಾನಂದ ಸಮಕ್ಕನ್ನವರ ಅವರು ಸಂವಿಧಾನ ಪೀಠಿಕೆ ಓದಿಸಿದರು.ಮುಖಂಡರಾದ ರವಿಂದ್ರ ಕಾಂಬಳೆ, ಪ್ರಕಾಶ ಇಟೇಕರ, ಅಶೋಕ ಬಾಲೇಶಗೋಳ್, ಪರುಶರಾಮ ಕೋಳಿ, ಕೃಷ್ಣಾ ಖಾತೇದಾರ, ಪರುಶರಾಮ ಪಾಟೀಲ,ಪ್ರಕಾಶ ಸತ್ಯನಾಯಿಕ, ಮಂಗಲ ತಮ್ಮನ್ನವರ ಹಾಜರಿದ್ದರು.


