Pratibha Boi
WhatsApp Group Join Now
Telegram Group Join Now
ಸಿಂದಗಿ: ಇತ್ತಿಚೇಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ೧೪ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ವಿಜಯಪುರ ನಗರ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಯಲಿಗಾರ ಅವರಿಗೆ ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ಸಿಂದಗಿ ಕಾನಿಪ ಸಂಘದ ತಾಲೂಕು ಅಧ್ಯಕ್ಷ ಆನಂದ ಶಾಬಾದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪೂರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ, ನಿವೃತ್ತ ಎಎಸ್‌ಐ ಎಂ.ಎಂ.ಹಂಗರಗಿ, ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಮುಂಡೇವಾಡಗಿ, ತಾಶಿಪ್ರ ಮಂಡಳಿ ನಿರ್ದೇಶಕ ವಿ.ಬಿ.ಕುರುಡೆ, ಚಂದ್ರಶೇಖರ ನಾಗರಬೆಟ್ಟಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಸಂಗನಗೌಡ ಪಾಟೀಲ, ಶಿವಾನಂದ ಬಡಾನೂರ, ಶಿವಾನಂದ ರೋಡಗಿ, ಭೀಮಾಶಂಕರ ತಾರಾಪೂರ, ದಾನೇಶ ಬಮ್ಮಣ್ಣಿ, ಪಂಡಿತ ಯಂಪುರೆ, ಮಹಾಂತೇಶ ನೂಲಾನವರ ಸೇರಿದಂತೆ ಅವರ ಸ್ನೇಹಿತರ ಬಳಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article