ಧಾರವಾಡ, 25 ನ. 2025 : ಇಲ್ಲಿನ ಸಿವಿಲ್ ಹಾಸ್ಪಿಟಲ್ ರಸ್ತೆಯಲ್ಲಿರುವ ವಾಸನ್ ಐ ಕೇರ್ ಆಸ್ಪತ್ರೆಯ ನವೀಕರಿಸಿದ ಮತ್ತು ವಿಸ್ತರಿಸಿದ ಹೊಸ ಕಟ್ಟಡವನ್ನು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎನ್. ಹೊನಕೇರಿ, ಹಾಗೂ ಡಾ. ಎಸ್.ಆರ್. ರಾಮನಗೌಡರ್ ಉದ್ಘಾಟಿಸಿದರು.2010ರಲ್ಲಿ ಸ್ಥಾಪಿತವಾದ ಈ ಆಸ್ಪತ್ರೆ, ವಿಶ್ವಮಟ್ಟದ ನೇತ್ರಚಿಕಿತ್ಸೆಯನ್ನು ಸಾಮಾನ್ಯ ಜನರಿಗೆ ಸಾಧ್ಯವಾಗುವ ವೆಚ್ಚದಲ್ಲಿ ನೀಡುತ್ತಿದ್ದು, ಧಾರವಾಡದ ನಾಗರಿಕರು ಆಸ್ಪತ್ರೆಯ ಸುಧಾರಿತ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಡಿಎಚ್ಓ ಹೊನಕೇರಿ ಅವರು ಈ ಸಂದಭ೯ದಲ್ಲಿ ಕರೆ ನೀಡಿದರು.ವಾಸನ್ ಐ ಕೇರ್ ಆಸ್ಪತ್ರೆ ಕರ್ನಾಟಕದಲ್ಲಿ 18 ಶಾಖೆಗಳು ಮತ್ತು ದೇಶಾದ್ಯಂತ 169 ಶಾಖೆಗಳು ಹೊಂದಿದೆ. ಆಸ್ಪತ್ರೆಯಲ್ಲಿ ಈಗಾಗಲೇ ಅತ್ಯಾಧುನಿಕ ಫೇಕೋ ತಂತ್ರಜ್ಞಾನ ಹಾಗೂ ಮೈಕ್ರೋಸ್ಕೋಪ್ಗಳ ಸಹಾಯದಿಂದ ಕಣ್ಣಿನ ಪೊರೆ ಮತ್ತು ರೆಟಿನಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಗುಣಮಟ್ಟದ ಸೇವೆಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನವೀಕರಿಸಿದ ಕೇಂದ್ರದಲ್ಲಿ ಹೆಚ್ಚುವರಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ.ನೇತ್ರತಜ್ಞ ಡಾ. ಸಂಜಯ್ ನಿಲೋಗಲ್ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ರಿಯಾಯಿತಿದರದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುವುದಾಗಿ ತಿಳಿಸಿದರು. ಈ ಶಾಖೆಯಲ್ಲಿ ಡಾ. ಮಂಜುಳಾ, ಡಾ. ವೀಣಾ ಪಟವಧ೯ನ್ ಸೇರಿದಂತೆ ನಿಪುಣ ನೇತ್ರತಜ್ಞರು ಹಾಗೂ ತರಬೇತಿ ಪಡೆದ ಸಿಬ್ಬಂದಿ ತಂಡವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಾಸನ್ ಐ ಕೇರ್ ನಿರ್ದೇಶಕ ಸುಂದರಂ ಮುರುಗೇಶನ್ ಹೇಳಿದರು.


