ಘಟಪ್ರಭಾ.ಗೋಕಾಕ ತಾಲೂಕಾ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರು, ಮಾಜಿ ಪಟ್ಟಣ ಪಂಚಾಯತ ಸದಸ್ಯರು, ಖ್ಯಾತ ವಕೀಲರು ಆದ ಗಂಗಾಧರ ದುಂಡಪ್ಪ ಬಡಕುಂದ್ರಿ ಹಾಗೂ ಶ್ರೀಮತಿ ಜಯಶ್ರೀ ಇವರ ಸುಪುತ್ರರಾದ ಚಿ.ಶಿವರಾಜ ಇವರ ಜೊತೆ ಪಟ್ಟಣದ ಪ್ರಗತಿಪರ ರೈತರಾದ ರಾವಸಾಹೇಬ ಶಂಕರಪ್ಪ ಹತ್ತರವಾಟ ಮತ್ತು ಶ್ರೀಮತಿ ನಿರ್ಮಲಾ ಇವರ ಸುಪುತ್ರಿ ಚಿ ಕು ಸೌ ಕಾ. ರಾಣಿ ಇವರ ಜೊತೆ ಹುಕ್ಕೇರಿ ಪಟ್ಟಣದ ಶ್ರೀ ವಿಶ್ವರಾಜ ಭವನದಲ್ಲಿ ಬುಧವಾರ ದಿ. 26-11-2025 ರಂದು ಇವರ ಶುಭ ವಿವಾಹವು ಅದ್ದೂರಿಯಾಗಿ ಜರುಗಿತು. ಈ ಶುಭ ವಿವಾಹದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗೋಕಾಕ ಶೂನ್ಯ ಸಂಪಾಧನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಅರಭಾವಿಮಠದ ದುರದುಂಡೇಶ್ವರ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು, ಘಟಪ್ರಭಾ ಹೊಸಮಠದ ಶ್ರೀ ವೀರೂಪಾಕ್ಷ ಮಹಾಸ್ವಾಮಿಗಳು,ಮಾಜಿ ಸಚಿವ ಎ ಬಿ ಪಾಟೀಲ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮುಖಂಡ ಅಂಬಿರಾವ ಪಾಟೀಲ, ಯುವ ಮುಖಂಡ ಪೃಥ್ವಿ ಕತ್ತಿ, ಕಾಂಗ್ರೇಸ್ ಮುಖಂಡ ಡಾ. ಮಹಾಂತೇಶ ಕಡಾಡಿ,ಮುಖಂಡ ಅಶೋಕ ಪೂಜೇರಿ,ಡಿ ಸಿ ಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಅಪ್ಪಯ್ಯಪ್ಪ ಬಡಕುಂದ್ರಿ,ಸುರೇಶ ಸನದಿ, ಸಿ ಎ ಕಾಡದವರ, ರಾಮಣ್ಣ ಹುಕ್ಕೇರಿ, ಮಾರುತಿ ವಿಜಯನಗರ, ಚಂದ್ರಶೇಖರ ಕೊಣ್ಣೂರ, ಡಿ ಎಮ್ ದಳವಾಯಿ,ರಮೇಶ ತುಕ್ಕಾನಟ್ಟಿ, ಶಿವಪುತ್ರ ಕೊಗನೂರ, ಡಾ.ಕೆಂಪಣ್ಣ ಚೌಕಸಿ, ಅರವಿಂದ ಬಡಕುಂದ್ರಿ, ಜಯಶೀಲ ಶೆಟ್ಟಿ, ಬಸವರಾಜ ತಡಸನವರ,ಮುತ್ತಣ್ಣ ಹತ್ತರವಾಟ ಸೇರಿದಂತೆ ಘಟಪ್ರಭಾ, ಮಲ್ಲಾಪೂರ ಪಿ ಜಿ ಗ್ರಾಮದ ಮುಖಂಡರು, ಜಿಲ್ಲಾ ನ್ಯಾಯಧೀಶರು, ಜಿಲ್ಲಾ, ತಾಲೂಕಾ ವಕೀಲರು, ಜಿಲ್ಲಾ ಮುಖಂಡರು, ಸಾರ್ವಜನಿಕರು, ಬಡಕುಂದ್ರಿ, ಹತ್ತರವಾಟ ಪರಿವಾರದ ಸದಸ್ಯರು, ಬಂದುಗಳು ಪಾಲ್ಗೊಂಡು ನೂತನ ವಧು ವರರಿಗೆ ಆಶೀರ್ವದಿಸಿದರು.


