ಕಾಗವಾಡ:ಸನ್ 2025-26 ನೇ ಸಾಲಿನ ನವೆಂಬರ್ ಮಾಹೆಯ ಸಂವಿಧಾನ ದಿನಾಚರಣೆಯನ್ನು ಕಾಗವಾಡ ತಾಲ್ಲೂಕಾಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ದಿನಾಂಕ 26/11/2025 ರಂದು ಬುಧವಾರ ಮುಂಜಾನೆ 10:30 ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಮತ್ತು ಸಂವಿಧಾನ ಪೀಠಿಕೆ ವಾಚನ ಮಾಡುವುದು ಹಾಗೂ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು,ಕಾರ್ಯಕ್ ರಮದಲ್ಲಿ ತಾಲ್ಲೂಕಿನ ಎಲ್ಲ ಅಧಿಕಾರಿಗಳು,ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯ ಹಾಜರಿರಬೇಕು ಎಂದು ಮಾನ್ಯ ತಹಶಿಲ್ದಾರರು ಕಾಗವಾಡ ಮತ್ತು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅಥಣಿ ಇವರು ತಿಳಿಸಿರುತ್ತಾರೆ.

