ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ: ಗೋಪಾಲ್ ಸಗರದ

Ravi Talawar
ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ: ಗೋಪಾಲ್ ಸಗರದ
WhatsApp Group Join Now
Telegram Group Join Now
ಬಳ್ಳಾರಿ:25.  ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು  ಬಹಳ ಮುಖ್ಯ ಎಂದು ಉಪ ನಿರ್ದೇಶಕ ಗೋಪಾಲ್ ಸಗರದ ತಿಳಿಸಿದರು.
ನಗರದ ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಬೆಂಗಳೂರು ಹಾಗೂ ಬಳ್ಳಾರಿ ಮತ್ತು ಪ್ರಾಂಶುಪಾಲರ ಸಂಘ ಬಳ್ಳಾರಿ ಮತ್ತು ಸರಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ಬಳ್ಳಾರಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಪುರಸಭೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ ಸುಂಕಪ್ಪ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಚ್ ಸಣ್ಣ ಶಿವರಾಂ, ಕಾರ್ಯಧ್ಯಕ್ಷರಾದ ಶ್ರೀತ ಶ್ರೀಶೈಲ, ಪ್ರಾಚಾರ್ಯ ಸಂಘದ ಕಾರ್ಯದರ್ಶಿ ಪಿ ನಾಗೇಶ್ವರರಾವ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ಗೊಲ್ಲ, ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕ ಡಾ:ವೇಣುಗೋಪಾಲ ಉಪಸ್ಥಿತರಿದ್ದರು.  ರಾಜ್ಯಶಾಸ್ತ್ರದ ಉಪನ್ಯಾಸಕರಾದ ನಾಗರೆಡ್ಡಿ ಕೆ ವಿ ನಿರೂಪಿಸಿದರು.
 ಅರ್ಥಶಾಸ್ತ್ರದ ಉಪನ್ಯಾಸಕರಾದ ಟಿ ತಿಮ್ಮಪ್ಪ ಪ್ರಾರ್ಥಿಸಿದರು.
 ಕಾರ್ಯಕ್ರಮದ ಅತಿಥಿಗಳನ್ನು ಉಪನ್ಯಾಸಕ ರಾಜೇಂದ್ರ  ಸ್ವಾಗತಿಸಿದರು.
WhatsApp Group Join Now
Telegram Group Join Now
Share This Article