12,000 ವರ್ಷಗಳಲ್ಲಿ ಮೊದಲ ಬಾರಿಗೆ ಇಥಿಯೋಪಿಯಾದಲ್ಲಿ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ

Ravi Talawar
12,000 ವರ್ಷಗಳಲ್ಲಿ ಮೊದಲ ಬಾರಿಗೆ ಇಥಿಯೋಪಿಯಾದಲ್ಲಿ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ
WhatsApp Group Join Now
Telegram Group Join Now

ನವದೆಹಲಿ: ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಇಥಿಯೋಪಿಯಾದಲ್ಲಿ ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದಟ್ಟ ಹೊಗೆ ಆವರಿಸಿರುವ ಕಾರಣದಿಂದಾಗಿ ಹಲವು ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಥಿಯೋಪಿಯಾದಲ್ಲಿನ ಜ್ವಾಲಾಮುಖಿಯ ಸ್ಫೋಟದಿಂದ ಬೂದಿ ಆವರಿಸಿಕೊಳ್ಳುತ್ತಿದ್ದು, ಉಂಟಾಗುವ ಸಂಭಾವ್ಯ ಅಡೆತಡೆಗಳನ್ನು ಎದುರಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸಲಹೆಗಳನ್ನು ರವಾನಿಸಲಾಗಿದೆ. ಬೂದಿಯಿಂದ ಆವೃತಗೊಂಡ ಮೋಡಗಳು ಪೂರ್ವಕ್ಕೆ ಚಲಿಸುತ್ತಿದ್ದು, ಇದು ಸೋಮವಾರ ಸಂಜೆ ತಡವಾಗಿ ಉತ್ತರ ಭಾರತವನ್ನು ತಲುಪುವ ಮುನ್ಸೂಚನೆ ಇದೆ.

ಹೈಲಿ ಗುಬ್ಬಿ ಜ್ವಾಲಾಮುಖಿಯು ಸುಮಾರು 12,000 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ. ಜ್ವಾಲಾಮುಖಿ ಬೂದಿ ಸಮಸ್ಯೆಯಿಂದಾಗಿ ಕೆಲವು ವಿಮಾನಗಳನ್ನು ರದ್ದುಗೊಳಿಸಿದ ವಿಮಾನಯಾನ ಸಂಸ್ಥೆಗಳಲ್ಲಿ ಅಕಾಸಾ ಏರ್, ಇಂಡಿಗೊ ಮತ್ತು ಕೆಎಲ್‌ಎಂ ಸೇರಿವೆ.

WhatsApp Group Join Now
Telegram Group Join Now
Share This Article