ಯರಗಟ್ಟಿ: ವ್ಯಕ್ತಿಯ ಜೀವಿತಾವಧಿಯಲ್ಲಿ ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾದುದಾಗಿರುತ್ತದೆ. ಈ ಅವಧಿಯಲ್ಲಿ ಶ್ರದ್ಧೆ, ನಿಷ್ಠೆಯಿಂದ ಕಲಿತರೆ ಮಾತ್ರ ವಿದ್ಯಾರ್ಥಿಗಳ ಜೀವನವು ಬಂಗಾರದ ಜೀವನವಾಗಲಿದೆ ಎಂದು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಕಾಲೇಜು ಕೈಪಿಡಿ ಬಿಡುಗಡೆ ಹಾಗೂ ಬಿ.ಎ. ಬಿ.ಕಾಂ. ಮತ್ತು ಬಿ.ಎಸ್.ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನ ಅಭಿವೃದ್ಧಿಗೆ ತಾವು ಸದಾ ಬದ್ಧರಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯಾವುದೇ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳಗಾವಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಶಂಕರ ಇಟ್ನಾಳ, ಮಾಮಡಮಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲಕ್ಕಪ್ಪ ಸಣ್ಣಿಂಗನವರ, ಯರಗಟ್ಟಿ ಪಟ್ಟಣ ಪಂಚಾಯಿತಿಯ ನಾಮನಿರ್ದೇಶಿತ ಸದಸ್ಯರುಗಳಾದ ಸಲೀಂ ಜಮಾದಾರ, ಹನುಮಂತ ಹಾರೂಗೊಪ್ಪ, ನಿಖಿಲ್ ಪಾಟೀಲ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಎಸ್.ಎಸ್. ಕುರುಬಗಟ್ಟಿಮಠ, ಹಣಮಂತ ರಂಗಾಪುರ, ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ಮಲಿಕಸಾಬ ಬಾಗವಾನ, ಸಿ.ಪಿ.ಐ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿದ್ಲಿಂಗಪ್ಪ ಗಾಳಿ ನಿರೂಪಿಸಿದರು, ಡಾ. ರಾಜಶೇಖರ ಬಿರಾದಾರ ಸ್ವಾಗತಿಸಿದರು. ಶಂಕರ ಲಗಳಿ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸುನಂದಾ ಮಾದರ, ಡಾ. ಅರ್ಷಾನ ಖಾಶಾನಟ್ಟಿ, ಚಿಕ್ಕಹನುಮಯ್ಯ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


