ವೈದ್ಯರ ನಿರ್ಲಕ್ಷö್ಯಕ್ಕೆ ಬಾಲಕ ಸಾವು, ಆರೋಪ

Pratibha Boi
ವೈದ್ಯರ ನಿರ್ಲಕ್ಷö್ಯಕ್ಕೆ ಬಾಲಕ ಸಾವು, ಆರೋಪ
WhatsApp Group Join Now
Telegram Group Join Now
 ಬಳ್ಳಾರಿ,ನ.೨೪: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವಾನ್ನಪ್ಪಿದೆ ಎಂದು ಪೋಷಕರು ಮತ್ತು ಬಂಧುಗಳು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಅಂದ್ರಾಳ ಗ್ರಾಮದ ಬಾಲಕ ಅರುಣ್(೮) ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟಿದ್ದು, ಘಟನೆಯನ್ನು ಕೇಳಿ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಪೋಷಕರಾದ ರವಿ ಮತ್ತು ಶಾಂತಾ ದಂಪತಿ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ೨೦ ದಿನಗಳಲ್ಲಿ ಒಂದೇ ಸ್ಥಳದಲ್ಲಿ ಹಲವು ಬಾರಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೊದಲ ಆಪರೇಷನ್ ನಂತರ ಮನೆಗೆ ಕಳುಹಿಸಿದ್ದರೂ ಬಾಲಕನಿಗೆ ಪುನಃ ನೋವು ಕಾಣಿಸಿಕೊಂಡಿದ್ದರಿAದ ಮತ್ತೆ ಬಿಮ್ಸ್ಗೆ ದಾಖಲಿಸಲಾಗಿ¬ತ್ತು. ಎರಡನೇ ಬಾರಿ ಸಹ ಶಸ್ತ್ರಚಿಕಿತ್ಸೆ ಮಾದರಿಯಲ್ಲೇ ಚಿಕಿತ್ಸೆ ನೀಡಿದ್ದರೂ ಯಾವುದೇ ಸುಧಾರಣೆ ಕಾಣಿಸದೇ, ಮಗು ಕೊನೆಯುಸಿರೆಳೆದಿದೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಘಟನೆಯ ನಂತರ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಸೇರಿದ್ದ ಪೋಷಕರು ಹಾಗೂ ಬಂಧುಗಳು ಆಸ್ಪತ್ರೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವೆಂದು ಆರೋಪಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿ
 ಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
WhatsApp Group Join Now
Telegram Group Join Now
Share This Article