ಕಾಗವಾಡ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ರಸ್ತೆ, ಶೌಚಾಲಯ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಅನುಷ್ಢಾನಗೊಳಿಸುತ್ತಿರುವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಉಗಾರ ಬುದ್ರಕ್, ಶಿರಗುಪ್ಪಿ, ಜುಗೂಳ ಮತ್ತು ಲೋಕುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ
ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ನಾನೂ ಕೂಡ ಸಚಿವಾಕಾಂಕ್ಷಿಯಾಗಿದ್ದು, ಸಂಪುಟ ವಿಸ್ತರಣೆ ಸಮಯದಲ್ಲಿ ನನಗೂ ಸಚಿವ ಸ್ಥಾನ ಕೊಡಬೇಕು ಎಂದು ಮುಖ್ಯಮಂತ್ರಿಗಳನ್ನು ಈಗಾಗಲೇ ಆಗ್ರಹಿಸಿರುವೆ ಎಂದ ಅವರು ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರ ನಿರಾಕರಿಸಿದರು.
ಜನಪರ ಕಾಮಗಾರಿಗಳು ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟದ ಕುರಿತು ಜಾಗೃತರಾಗಿರಬೇಕು ಮತ್ತು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಿ ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು ಎಂದರು.
ಶಾಸಕ ರಾಜು ಕಾಗೆ ಉಗಾರ ಬುದ್ರಕ್ ಗ್ರಾಮದಲ್ಲಿ ಉಗಾರ ಶಿರಗುಪ್ಪಿ ಗ್ರಾಮಕ್ಕೆ ಹೊಂದಿಕೊಂಡ 2 ಕೋಟಿ ವೆಚ್ಚದ ಮಾಂಜರಿ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿಗೆ, ಶಿರಗುಪ್ಪಿ ಗ್ರಾಮದಲ್ಲಿ ಮಡಿವಾಳ ಮಾಚಿ ದೇವ, ಮರಗುಬಾಯಿ ದೇವಸ್ಥಾನದ ಸಮುದಾಯ ಭವನ ಹಾಗೂ ಚರಂಡಿ ಕಾಮಗಾರಿಗೆ ಮತ್ತು ಜುಗೂಳ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಲೋಕುರ ಗ್ರಾಮದಲ್ಲಿ ಪೇವಿಂಗ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇ ಸಂಧರ್ಭದಲ್ಲಿ. ಅಣ್ಣಾಸಾಹೇಬ ಪಾಟೀಲ, ಸಂತೋಷ ಪಾಟೀಲ, ಸಾಗರ ಚೌಗಲೆ, ಸೋಮರಾಜ ಪಾಟೀಲ, ವಿವೇಕ ಪಾಟೀಲ, ಸಿದ್ದಗೌಡ ಪಾಟೀಲ, ಅಡಿವೆಪ್ಪ ಉಳ್ಳಾಗಡ್ಡಿ, ಸಂತೋಷ ಶೇಗುಣಸಿ, ಶಂಕರ ಚವ್ಹಾಣ, ಮುತ್ತಪ್ಪಾ ಜಮಖಂಡಿ, ಚಿದು ಹಣಮಾಪುರೆ, ದಿಲೀಪ ಮಾದರ, ಪ್ರಕಾಶ ಕಾಂಬಳೆ,ಉಪಸ್ಥಿತರಿದ್ದರು


