ಗದಗ : ಇತ್ತೀಚಿಗೆ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಇಬ್ಬರು ಬಡ ರೈತರ ೧೦ ಎಕರೆ ಜಮೀನಿನಲ್ಲಿ ಬೆಳೆದಂತಹ ಗೋವಿನ ಜೋಳಕ್ಕೆ ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಮುಖಾಂತರ ದುಷ್ಕರ್ಮಿಗಳು ಬೆಳೆಯನ್ನು ಹಾಳು ಮಾಡಿರುವ ಕೃತ್ಯವನ್ನು ಖಂಡಿಸಿ ಹಾಗೂ ನೊಂದ ರೈತರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಅವರ ಬಣದ ಮುಂಡರಗಿ ತಾಲೂಕಿನ ಮಹಿಳಾ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಕುಡುಪಲಿ ಹಾಗೂ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಿರೇಮಠ ಅವರು ಹಾರೂಗೇರಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಧೈರ್ಯವನ್ನು ತುಂಬಿ ಸಂತಾಪವನ್ನು ವ್ಯಕ್ತಪಡಿಸಿ, ಮುಂಡರಗಿ ತಾಲೂಕು ಹಸಿರು ಸೇನೆ ವತಿಯಿಂದ ಧನಸಹಾಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಮುಂಡರಗಿ ತಾಲ್ಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.


