ಚೆನ್ನೈ, ನವೆಂಬರ್ 24: ತಮಿಳುನಾಡಿನ ತೇಂಕಾಸಿ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಢಿಕ್ಕಿಯಾಗಿ ಭಾರೀ ಸಾವು ನೋವು ಸಂಭವಿಸಿದೆ. ಈ ಭೀಕರ ಅಪಘಾತ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, 28 ಮಂದಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮುಖಾಮುಖಿ ಡಿಕ್ಕಿ ಹೊಡೆದ ಎರಡು ಬಸ್ಸುಗಳಲ್ಲಿ ಒಂದು ಬಸ್ಸು ಮದುರೈನಿಂದ ಸೆಂಕೊಟ್ಟೈಗೆ ತೆರಳುತ್ತಿತ್ತು. ಮತ್ತೊಂದು ಬಸ್ಸು ತೇಂಕಾಸಿಯಿಂದ ಕೋವಿಲ್ಪಟ್ಟಿಗೆ ಹೋಗುತ್ತಿತ್ತು. ತೇಂಕಾಸಿ ಮದುರೈ ರಸ್ತೆಯಲ್ಲಿರುವ ಅಚ್ಚಂಪಟ್ಟಿ ಸಮೀಪದ ಇಡೈಯಕ್ಕಲ್ನ ದುರೈಸಾಮಿಪುರಂ ಎಂಬಲ್ಲಿ ಎರಡೂ ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ.


