ಕನ್ನಡ ಉಳುವಿಗಾಗಿ ಯುವಕರಲ್ಲಿ ಉತ್ಸಹ ಬರಬೇಕು :ಚಂದ್ರಶೇಖರ ಶ್ರೀ

Ravi Talawar
 ಕನ್ನಡ ಉಳುವಿಗಾಗಿ ಯುವಕರಲ್ಲಿ ಉತ್ಸಹ ಬರಬೇಕು :ಚಂದ್ರಶೇಖರ ಶ್ರೀ
WhatsApp Group Join Now
Telegram Group Join Now
ಹುಕ್ಕೇರಿ.ಕನ್ನಡ ಉಳುವಿಗಾಗಿ ಯುವಕರಲ್ಲಿ ಉತ್ಸಾಹ ಬರಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ರೂಪಕಗಳ ಮೇರವಣೆಗೆಯನ್ನು ಕ್ಯಾರಗುಡ್ಡದ ಮಂಜುನಾಥ ಮಹಾರಾಜರು,ವಿರಕ್ತಮಠದ ಶಿವ ಬಸವ ಮಹಾಸ್ವಾಮಿಗಳು ಹಾಗೂ ಹುಣಿಶ್ಯಾಳ ನಿಜಗುನಾಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಯಮಿ ಪೃಥ್ವಿ ಕತ್ತಿ  ಭುವನೇಶ್ವರಿ ಪುತ್ಥಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಕ ವಾದ್ಯಗಳನ್ನು ನುಡಿಸುವ ಮೂಲಕ ಚಾಲನೆ ನೀಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ್ ಕತ್ತಿ ಯವರ ಮಾರ್ಗದರ್ಶನದಲ್ಲಿ ತಾಲೂಕಿನ ಗಣ್ಯರು,ಯುವಕರು ರಾಜ್ಯೋತ್ಸವ ಉತ್ಸಾಹಿ ಸಮಿತಿ ವತಿಯಿಂದ ಸತತ ಐದು ವರ್ಷಗಳಿಂದ ಆಚರಿಸುತ್ತಿರುವ ಕಾರ್ಯಕ್ರಮ ದಿನ ಪೂರ್ತಿ ಸಾಂಸ್ಕೃತಿಕ ಮತ್ತು ಬೃಹತ್ ವಾದ್ಯ ಗಳೊಂದಿಗೆ ಆಚರಿಸಲಾಗುತ್ತಿದೆ ಕಾರಣ ಕನ್ನಡ ಪ್ರೇಮಿಗಳು ಕಾರ್ಯಕ್ರಮವನ್ನು ಯಶಸ್ವಿಗೋಳಿಸ ಬೇಕು ಎಂದರು.
ನಂತರ ವಿವಿಧ ಕಲಾ ತಂಡಗಳು ವೇಷ ಭೂಷನೆಗಳೊಂದಿಗೆ ಪಾರಂಪರಿಕ ರೂಪಕಗಳು ಮೇರವಣೆಗೆ ಮೂಲಕ ಕೋರ್ಟ ಸರ್ಕಲ್ ತಲುಪಿದವು.
ಕಸಾಪ ಅದ್ಯಕ್ಷ ಪ್ರಕಾಶ ಅವಲಕ್ಕಿ ಮಾತನಾಡಿ ಈ ಬಾರಿ ಹುಕ್ಕೇರಿ ನಗರದಲ್ಲಿ ಸಾಂಪ್ರದಾಯಿಕ ವಾದ್ಯಗಳ ರೂಪಕಗಳ ಮುಖಾಂತರ ರಾಜ್ಯೋತ್ಸವ ಆಚರಿಸುವದು ನಮಗೆ ಖುಷಿ ತಂದಿದೆ ಎಂದರು.
ಯುವ ಧುರುಣ ಸುಹಾಸ ನೂಲಿ ಉತ್ಸಾಹಿ ಸಮಿತಿ ಸದಸ್ಯರಿಗೆ ಶ್ರೀಗಳಿಗೆ ಸತ್ಕರಿಸಿದರು.
ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಕರ್ನಾಟಕ ರಾಜ್ಯೋತ್ಸವ ವನ್ನು ನವೆಂಬರ್ 1 ರಂದು ಬೆಳಗಾವಿ ನಗರದಲ್ಲಿ ಅದ್ದೂರಿಯಾಗಿ ಆಚರಿಸಿದರೆ ನವೆಂಬರ್ 23 ರಂದು ಹುಕ್ಕೇರಿ ನಗರದಲ್ಲಿ ವಿಬೃಂಜನೆಯಿಂದ ಆಚರಿಸುತ್ತಾರೆ ,ಗಡಿ ಭಾಗದಲ್ಲಿ ಕನ್ನಡ ಉಳುವಿಗಾಗಿ ಯುವಕರು ಉತ್ಸಾಹದಿಂದ ರಾಜ್ಯೋತ್ಸವ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುರುರಾಜ ಕುಲಕರ್ಣಿ, ಎ ಕೆ ಪಾಟೀಲ, ರಾಜು ಮುನ್ನೋಳ್ಳಿ, ರಮೇಶ ಬೋರಗಾಂವಿ, ಕುಮಾರ ಜುಟಾಳೆ, ಭೀಮಶಿ ಗೋರಕನಾಥ ಸೇರಿದಂತೆ ರಾಜ್ಯೋತ್ಸವ ಉತ್ಸಹಿ ಸಮಿತಿ ಸದಸ್ಯರು,ಯುವಕರು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article