ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು
ಬೆಳಗಾವಿ: ದಲಿತ ಸಮುದಾಯ ಬೆಳೆಯಬೇಕಾದರೆ ಸಮುದಾಯದಲ್ಲಿ ಒಗ್ಗಟ್ಟು, ಶಿಕ್ಷಣ, ಉದ್ಯಮಶೀಲತೆ ಮತ್ತು ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯದ ಮೇಲೆ ಗಮನ ಹರಿಸಬೇಕು. ಮತ್ತು ಸಮುದಾಯ ಜನರನ್ನು ಬೆಳೆಸುವ ಕಾರ್ಯವಾಗಬೇಕು. ಬಾಬಾ ಸಾಹೇಬ ಡಾ. ಅಂಬೇಡ್ಕರ ನೀಡಿರುವ ಸಂವಿಧಾನದ ಮೇಲೆ ನಮ್ಮ ಭವಿಷ್ಯ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಿಹೊಳಿ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸ-ಅಭಿವೃದ್ದಿ ಸಂಘ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಇತಿಹಾಸ ಅರಿತುಕೊಂಡಾಗ ಮಾತ್ರ ಹೊಸ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ದಲಿತ ಸಮುದಾಯ ಜನರು ಹಾದು ಹೋಗುವ ಜಾಗವನ್ನು ಸ್ವಚ್ಛಗೊಳಿಸಿ, ಅವಮಾನಿಸುವ ಕೆಲಸಗಳಾಗಿವೆ. ಪೂರ್ವಜರು ಅನುಭವಿಸಿದ ಶೋಷಿತ-ಅನ್ಯಾಯವನ್ನು ಮುಂದಿನ ನಮ್ಮ ಪೀಳಿಗೆಗಳು ಆ ನೋವನ್ನು ಅನುಭವಿಸಬಾರದು.
ಹೀಗಾಗಿ ನಾವೆಲ್ಲರೂ ಶಿಕ್ಷಣದೆಡೆ ಸಾಗಿ, ಸಮುದಾಯ ಗಟ್ಟಿಗೊಳಿಸಬೇಕು. ದಲಿತ ಸಮುದಾಯ ಬೆಳೆಯಲು ಕಾರಣ ಡಾ. ಅಂಬೇಡ್ಕರ ನೀಡಿರುವ ಕೊಡುಗೆ. ಒಂದು ವೇಳೆ ಸಂವಿಧಾನ ಇಲ್ಲದಿದ್ಧರೆ ಬಾವಿಯಲ್ಲಿರುವ ನೀರನ್ನು ಕುಡಿಯಲು ಕೆಲವು ಸಮುದಾಯಗಳು ಬೀಡುತ್ತಿರಲಿಲ್ಲ ಎಂದು ಎಚ್ಚರಿಸಿದರು.
ಸಮಾಜದಲ್ಲಿ ಸಾಕಷ್ಟು ನೂನ್ಯತೆಗಳಿವೆ. ಬಡವನದಿಂದ ಶಿಕ್ಷಣದಿಂದ ಬಹಳ ಜನರು ವಂಚಿತರಾಗುತ್ತಿದ್ದಾರೆ. ಸರಕಾರ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನ ಪಟ್ಟರು, ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಆರ್ಥಿಕ ಪ್ರಗತಿ ಹೊಂದಿವರು ಹಾಗೂ ಸರಕಾರ ಅಧಿಕಾರಿಗಳು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಪದವಿ ಶಿಕ್ಷಣ ನೀಡಲು ಪ್ರಯತ್ನಿಸಿದರೇ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.
ಈ ಸಮುದಾಯದ ಸಮಸ್ಯೆಗಳ ಕುರಿತು ಹುಬ್ಬಳ್ಳಿಯಲ್ಲಿ ಸಭೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸ-ಅಭಿವೃದ್ದಿ ಸಂಘಟಗೆ ಬೆಳಗಾವಿಯಲ್ಲಿ ಜಾಗ ಬೇಕು ಎಂಬ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ. ಪ್ರಾಧಿಕಾರದಿಂದ ಈ ಕಾರ್ಯವೂ ಶೀಘ್ರವೇ ನೇರವೇರಿಲಿದೆ. ಮಹನಿಯರ ಇತಿಹಾಸವನ್ನು ಈ ದೇಶದಲ್ಲಿ ಮುಚ್ಚುವ ಪ್ರಯತ್ನಗಳು ಆಗಿದೆ. ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ-ತಾರತ್ಯಮಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಸಿ ಇತ್ಯರ್ಥಗೊಳಿಸುವ ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಇತಿಹಾಸ ಬಳ್ಳವರು, ಇತಿಹಾಸ ಸೃಷ್ಟಿಸಲು ಸಾಧ್ಯ ಎಂಬ ಡಾ. ಅಂಬೇಡ್ಕರ್ ಅವರು ಮಾತಿನಂತೆ ತಾವು ಪಡೆದ ಶಿಕ್ಷಣದಿಂದ ಕುಟುಂಬ ಹಾಗೂ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಸಿನಿಮಾ ನಟರು, ಕ್ರೀಡಾಪಟುಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವ ಬದಲು ಸಮಾಜ ಸುಧಾರಕರ ಪ್ರೇರಣೆ ಇಂದಿನ ಪೀಳಿಗೆಗೆ ಅವಶ್ಯವಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಸಮಾಜದ ಸುಧಾರಕರ ನಿಜವಾದ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಜಾತಿ, ಧರ್ಮದ ಸಂಘರ್ಷಗಳು ಕೊನೆಗೊಂಡು ದೇಶದ ಅತಿ ವೇಗವಾಗಿ ಪ್ರಗತಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಜು ( ಆಪೀಸ್) ಸೇಠ, ಹಿರಿಯ ಸಾಹಿತ್ಯ ಯು.ರು . ಪಾಟೀಲ್, ಜನಪದ ಹಿರಿಯ ಸಾಹಿತ್ಯ ಜ್ಯೋತಿರ್ಲಿಂಗ ಹೊನಕಟ್ಟಿ, ಕ.ರಾ.ಸ-ಅಬಿವೃದ್ದಿ ಸಂಘದ ಅಧ್ಯಕ್ಷರಾದ ಸುಭಾಷ ನೇತ್ರೆಕರ್, ಭೀಮರಾವ್ ಪವಾರ್, ಸಲಹೆಗಾರರಾದ ಶಿವಕುಮಾರ್ ದೊಡಮನಿ ಹಾಗೂ ಇತರರು ಇದ್ದರು.


