ಧಾರವಾಡ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡ, ಹೊಂಬೆಳಕು ಪ್ರತಿಷ್ಠಾನ ಧಾರವಾಡ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ತಾಲೂಕು ಆರೋಗ್ಯ ಕೇಂದ್ರ, ಡಾIIಅಗರವಾಲ್ಸ್ ಕಣ್ಣಿನ ಆಸ್ಪತ್ರೆ, ಮತ್ತು ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ” ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಶ್ರೀ.ಶ್ರೀ.ಶ್ರೀ. ನಾಗಭೂಷನ ಶಿವಯೋಗಿಗಳು ಸಿದ್ಧಾಶ್ರಮ, ದೇವರಹುಬ್ಬಳ್ಳಿ ಇವರು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ.“ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಂದು ಸಾರ್ವಜನಿಕರಲ್ಲಿ ಮನವರಿಕೆ ಮಾಡಿದರು. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯ ಸರಿ ಇರುವುದಿಲ್ಲ, ಆದ್ದರಿಂದ ಈ ರೀತಿಯ ಶಿಬಿರಗಳು ಎಲ್ಲರಿಗೂ ಅನುಕೂಲ ಆಗುತ್ತವೆ ಎಂದರು.
ಆರೋಗ್ಯವೇ ಭಾಗ್ಯ ಎನ್ನುವಂತೆ ಮಾನಸಿಕ ಆರೋಗ್ಯದಂತೆ ದೈಹಿಕ ಆರೋಗ್ಯವು ಬಹಳ ಮುಖ್ಯವಾಗಿದೆ. ಕತ್ತಲಿನಿಂದ ಬೆಳಕಿನ ಕಡೆಗೆ ನಮ್ಮನ್ನು ಕರೆದೊಯ್ಯುವ ಕಣ್ಣು ದೇಹದ ಭಾಗಗಳಲ್ಲಿ ಮುಖ್ಯವಾದುದು. ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿದಾಗ ಯಶಸ್ಸು ಸುಲಭವಾಗಿ ದೊರೆಯುತ್ತದೆ ಎಂದು ಶಿಬಿರದ ಆಯೋಜಕರು ಮತ್ತು ಶ್ರೀ ಸಾಯಿ ಕಾಲೇಜಿನ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಹೇಳಿದರು. ಇದೇ ಸಂದರ್ಭದಲ್ಲಿ ದೇವರಹುಬ್ಬಳ್ಳಿಯ ಸರಕಾರಿ ಶಾಲೆಯ 9ನೇ ಮತ್ತು 10 ನೇ ತರಗತಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 100 ಕ್ಕು ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು ಹಾಗೂ “ಉಚಿತ ಆರೋಗ್ಯ ಶಿಬಿರದಲ್ಲಿ 250 ಕ್ಕೂ ಹೆಚ್ಚು ಗ್ರಾಮಸ್ತರಿಗೆ ಬಿಪಿ, ಶುಗರ, ನೇತ್ರ ತಪಾಸಣೆ ಮತ್ತು ಇಸಿಜಿ ತಪಾಸಣೆ ಉಚಿತವಾಗಿ ಮಾಡಿಸಲಾಯಿತು.
ಶ್ರೀ ಬಸವರಾಜ ಹೊಂಗಲ್ ಹಿರಿಯ ಪತ್ರಕರ್ತರು ಉದಯವಾಣಿ, ಧಾರವಾಡ, ಇವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ” ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಹೆಚ್ಚು ಉಪಯೋಗವಾಗುತ್ತದೆ. ಡಾ. ವೀಣಾ ಬಿರಾದಾರ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅಂತವರ ಮಾರ್ಗದರ್ಶನ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಸಾಧಿಸಲು ಸಹಕಾರಿಯಾಗುವುದು ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಮಂಜುನಾಥ ಶೆಲ್ಲಿಕೇರಿ ಅಧ್ಯಕ್ಷರು, ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ. ಶ್ರೀಮತಿ ರೇಖಾ ಬಾ. ಬೇಲೂರು ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ. ಶ್ರೀ ವೀರಭದ್ರಪ್ಪಾ ಗಣಾಚಾರಿ ಪಿ.ಡಿ.ಓ., ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ. ಶ್ರೀಮತಿ ಆರತಿ ಹಿರೇಮಠ ಸದಸ್ಯರು ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ. ಶ್ರೀ ಭೀಮಪ್ಪ ಬಳಿಗೇರ ಕಾರ್ಯದರ್ಶಿಗಳು, ಗ್ರಾಮ ಪಂಚಾಯತ್, ದೇವರಹುಬ್ಬಳ್ಳಿ. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜೀಯಾ ಮುಧೋಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಡಾ. ಆರತಿ ಹಾಲಗಡಗಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಮುಗದ. ವೈದ್ಯರು ಮತ್ತು ಸಿಬ್ಬಂದಿ ವರ್ಗ, ಗ್ರಾಮದ ಹಿರಿಯರು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ ಬಾಪು ಮೊರಂಕರ ನಿರೂಪಿಸಿದರು, ಪ್ರಾಚಾರ್ಯರಾದ ಶ್ರೀ ನಾಗರಾಜ ಶಿರೂರ ರವರು ವಂದಿಸಿದರು.


