ಮಹಾಲಿಂಗಪುರ : ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ)ಹೂವಿನ ಹಡಗಲಿ ಸುಕ್ಷೇತ್ರ ಮೈಲಾರ ವಿಜಯನಗರ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಅಂಗವಾಗಿ ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ ೨೦೨೫ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಚಿಮ್ಮಡ ಗಲ್ಲಿ ನಿವಾಸಿ ರಾಜೇಶ ದಾನಪ್ಪ ಹುಣಶ್ಯಾಳ ಇವರಿಗೆ ೨೦೨೫ ನೇ ಸಾಲಿನ ” ಮೈಲಾರ ಬಸವಲಿಂಗ ಶ್ರೀ ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ.
ಶ್ರೀಯುತರ ಶಿಕ್ಷಣ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುತ್ತಿದ್ದು . ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು.ಇದೆ ೨೩ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಾ ರಾಜೇಶ ಹುಣಶ್ಯಾಳ ಇವರು ಸಧ್ಯ ಹುಬ್ಬಳ್ಳಿಯ ಕೆ ಎಂ ಸಿ ಯಲ್ಲಿ ಔ?ದ ಶಾಸ್ತ್ರ ವಿಭಾಗದಲ್ಲಿ ಸಹಾಯಕ್ ಪ್ರಾಧ್ಯಾಪಕ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಇವರನ್ನು ನಗರದ, ಗಣ್ಯಮಾನ್ಯರು ಸ್ನೇಹಿತರು ಅಭಿನಂದಿಸಿದ್ದಾರೆ.
ಶರಣಶ್ರೀ ರಾಜ್ಯ ಪ್ರಶಸ್ತಿಗೆ ರಾಜೇಶ ಹುಣಶ್ಯಾಳ ಆಯ್ಕೆ


