ಹುಕ್ಕೇರಿ : ಮೂಲಭೂತ ಸೌಲಭ್ಯಗಳಿಗೆ ಸರಕಾರದ ಅನುದಾನ ಕೊರತೆಯ ನಡುವೆ ಅವಶ್ಯP ಕೆಲಸಗಳಿಗೆ ಆಧ್ಯತೆ ನೀಡಿ ಹಂತ ಹಂತವಾಗಿ ಕಾಮಗಾರಿಗಳ ಮೂಲಕ ಗ್ರಾಮಗಳ ಸವಾಂಗೀಣ ಅಭಿವೃದ್ಧಿ ಒತ್ತು ನೀಡಲಾಗುತ್ತಿರುವದು ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಅವರು ಹುಕ್ಕೇರಿ ವಿಧಾನಸಭಾ ಮತ ಕ್ಷೇತ್ರದ ಪ್ರದಾನಮಂತ್ರಿ ಸಡಕ ಯೋಜನೆಯಡಿ ಶೇಲಾಪೂರ ಗ್ರಾಮದಿಂದ ಚಿಕ್ಕೋಡಿ ಕೂಡುವ ರಸ್ತೆಗೆ ೩ ಕಿ.ಮಿ ೬೬ ಲಕ್ಷರೂ ವೆಚ್ಚ ದಲ್ಲಿ ಡಾಂಬರೀಕರಣಕ್ಕೆ ಕಾಮಗಾರಿಗೆ ಹಾಗೂ ಜಿಲ್ಲಾ ಪಂಚಾಯತ ಇಂಜನೀಯರಿಂಗ ವಿಭಾಗದಡಿ ಯಾದಗೂಡ, ಬೆಳವಿ ಶೇಲಾಪುರ, ಹಣಜಾನಟ್ಟಿ, ಎಲ್ಲಿಮುನ್ನೋಳಿ, ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ಮೇಲ್ಚಾವಣಿ ಶಾಲಾ ಕಟ್ಟಡಗಳ ದುರಸ್ತಿಗಾಗಿ ೩೦ ಲಕ್ಷರೂ ವೆಚ್ಚದ ಕಾಮಗಾರಿಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಅವರು ಹುಕ್ಕೇರಿ ಮತಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಗ್ರಾಮಗಳ ಜನರಿಗೆ ಮುಟ್ಟಿಸುತ್ತಿರುವದು ಅಭಿನಂದನರ್ಹ ಎಂದ ಅವರು ರಸ್ತೆಗಳ ನಿರ್ಮಾಣಕ್ಕೆ ಮುಂಚೆ ರೈತರು ತಮ್ಮ ಪೈಪ ಲೈನ್ಗಳನ್ನು ಹಾಕಿಕೊಳ್ಳಬೇಕು ನಂತರ ರಸ್ತೆಗಳನ್ನ ಅಗೆದರೆ ರಸ್ತೆಗಳು ಹಾಳಾಗುತ್ತದೆ ಎಂದು ರೈತರಲ್ಲಿ ಮನವಿ ಮಾಡಿಕೊಂಡರು. ಹಾಗೂ ಸ್ಥಳಿಯ ಶಾಲಾ ಮುಖ್ಯಸ್ಥರು ,ಶಾಲಾಉಸ್ತುವಾರಿ ಸಮಿತಿಯವರು ಮುಂದೆ ನಿಂತು ಗುಣಮಟ್ಟದ ಕಾiಗಾರಿಯ ಬಗ್ಗೆ ನಿಗಾ ವಹಿಸಿಕೊಳ್ಳಬೇಕು ಎಂದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ಯಪ್ಪಾ ನಾಯಿಕ, ಕೆಂಪಣ್ನ ವಾಸೇದಾರ, ಗ್ರಾ.ಪಂ ಉಪಾಧ್ಯಕ್ಷ ಶಿವನಗೌಡ ಪಾಟೀಲ್,ಪಿಕೆಪಿಎಸ್ ಅಧ್ಯಕ್ಷ ಅಲಗೌಡ ಪಾಟೀಲ, ಗ್ರಾಪಂ ಸದಸ್ಯರಾದ ಜಯಶ್ರೀ ಸತ್ಯಾಯಿಗೋಳ, ಶೋಭಾ ಮಗದುಮ್ಮ, ನಜೀರ ಮುಲ್ತಾನಿ, ರಾಮಣ್ಣ ತೇರದಾಳಿ, ಬಿ.ಎಮ್ ರುದ್ರಾಪುರಿ. ನೆಮ್ಮಣ್ನ ಕೊಟ್ಟಲಗಿ ಕುಮಾರ ರುದ್ರಾಪುರಿ, ದೇವರಾಜ ಜನಮಟ್ಟಿ, ದುಂಡಪ್ಪ್ಪಾ ಮೋಳಗಿ, ರಾಮಣ್ಣ ಪಾಟೀಲ, ವಾಗೀಶ ಕಲ್ಲೋಳಿಮಠ, ಎಇಇ. ತಬಸಂ ನಾಯಿಕವಾಡಿ ,ಎಇ ಸಭಾಸಯೈದ್ ಗುತ್ತಿಗೆದಾರ ಮಲ್ಲಪ್ಪಾ ಬಿಸಿರೊಟ್ಟಿ, ಭರತೇಶ ನಾಯಿಕ, ಶಿಕ್ಷಕರು ಶಾಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಕಟ್ಟಡ, ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ : ಪೃಥ್ವಿ ಕತ್ತಿ


