ಮಹಾಲಿಂಗಪುರ : ಭಾರತ ದೇಶ ಅನೇಕತೆಗಳಲ್ಲಿ ಏಕತೆ ಹೊಂದಿರುವ ಸರ್ವ ಧರ್ಮಗಳ ಸಾಮರಸ್ಯದ ಬಿಡು ಭಕ್ತಿಯಲ್ಲಿ ಶಕ್ತಿ ಹೊಂದಿರುವ ಅಧ್ಯಾತ್ಮ ಕ್ಷೇತ್ರ ಮತ್ತು ಗುರು ಪರಂಪರೆಯ ವಿಶ್ವ ಗುರು ನಮ್ಮ ಹೆಮ್ಮೆಯ ಭಾರತ ಅದರಲ್ಲೂ ಶ್ರೇ? ಗುರು ಊರಿಗೆ ಬಂದರೆ ಊರೆಲ್ಲಾ ಹಬ್ಬ ಅದರಲ್ಲೂ ಗುರುವಿನೊಂದಿಗೆ ಪಾದಯಾತ್ರೆ ಮಾಡುವ ಯೋಗ ಎಂದರೆ ಮನು?ನ ಜೀವನದ ಸ್ವಾರ್ಥಕ ಕ್ಷಣ ಆ ಕ್ಷಣಕ್ಕೆ ಸಾಕ್ಷಿಯಾಗಿದ್ದು. ಮಹಾಲಿಂಗಪುರದಲ್ಲಿ ಕೊಪ್ಪಳ ಅಭಿನವ್ ಗವಿಸಿದ್ದೇಶ್ವರ ಸ್ವಾಮೀಜಿ ಸದ್ಭಾವನಾ ಪಾದಯಾತ್ರೆ ಭಾವಕ್ಯೆತೆಗೆ ಸಾಕ್ಷಿಯಾಗಿತ್ತು ಸರ್ವಧರ್ಮಿಯರು ಪಾಲ್ಗೊಂಡು ಭಾವೈಕತೆ ಮರೆದು ಪಾದಯಾತ್ರೆ ದಾರಿಯುದ್ಧಕ್ಕೂ ಜೊತೆಯಾಗಿ ಸಾಗಿದ್ದು ವಿಶೇ?.
ಶನಿವಾರದಿಂದ ನಗರದಲ್ಲಿ ೯ ದಿನಗಳ ಕಾಲ ಅಧ್ಯಾತ್ಮ ಪ್ರವಚನ ಜರುಗಲಿದ್ದು ಆದರ ಪ್ರಯುಕ್ತ ಪ್ರತಿ ದಿನ ಮುಂಜಾನೆ ೬.೩೦ ರಿಂದ ೮ ಗಂಟೆಯವರೆಗೆ ಪ್ರತಿ ದಿನ ಒಂದು ಏರಿಯಾ ಸದ್ಭಾವನಾ ಪಾದ ಯಾತ್ರೆ ಕೈಗೊಂಡಿದ್ದು ಅದರ ಪ್ರಯುಕ್ತ ಇಂದು ಜಗದ್ಗುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ನಡುಚೌಕಿ, ಜವಳಿ ಬಜಾರ, ಕುಬಸದ ಓಣಿ, ನೀಲಕಂಟೇಶ್ವರ ದೇವಸ್ಥಾನ, ಮಾರುತಿ ಮಂದಿರ, ಕಾಳಿಕಾ ಮಂದಿರ, ವಿಠಲ ರುಕ್ಮಿಣಿ ಮಂದಿರ ಮಾರ್ಗವಾಗಿ ಬುದ್ನಿ ಪಿ ಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲುಪಿದ ನಂತರ ಪೂಜೆ ಸಲ್ಲಿಸಿದರು.
ಆಲಿಂಗನ ಸ್ವಾಗತ : ಕೊಪ್ಪಳದ ಅಭಿನವ ಗವಿಸಿದ್ದೇಶ್ವರರ ಸ್ವಾಗತಕ್ಕೆ ಶ್ರೀ ಮಹಾಲಿಂಗೇಶ್ವರರ ದೇವಸ್ಥಾನದ ಸುತ್ತಲೂ ರಂಗೋಲಿಯ ಚಿತ್ತಾರ ಬಿಡಿಸಿ ಬೆಳಗಿನ ೬: ೨೦ ಗಂಟೆಗೆ ಶ್ರೀ ಮನಮಹಾರಾಜಾ ನಿರಂಜನ್ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಗುಡಿಯ ಮಹಾದ್ವಾರ ಬಳಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಬರುವಿಕೆಗೆ ಕಾಯುತ್ತಾ ನಿಂತು ಗವಿಶ್ರೀ ಆಗಮಿಸಿದ ತಕ್ಷಣ ಆಲಿಂಗನ ಮಾಡಿ ಬರಮಾಡಿಕೊಂಡು ಭವ್ಯ ಸ್ವಾಗತ ಕೋರಿ ಮಂದಿರದೊಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಜೊತೆಯಾಗಿ ಪಾದಯಾತ್ರೆ ಸಾಗಿದರು.
ಭವ್ಯ ಸ್ವಾಗತ : ಕೊಪ್ಪಳದ ಗವಿ ಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ನಗರದ ಜನ ಹೃದಯ ಸ್ಪರ್ಶ್ ಸ್ವಾಗತ ಮಾಡಿ ಬರಮಾಡಿಕೊಂಡರು. ಸದ್ಭಾವನಾ ಯಾತ್ರೆ ದಾರಿಯುದ್ಧಕ್ಕೂ ನೀರು ಹಾಕಿ ರಂಗೋಲಿ ಹಾಕಿ ರಸ್ತೆಯ ಬದಿ ನಿಂತು ಪು?ವ್ರಷ್ಟಿ ಮಾಡಿ ಭಕ್ತಿ ಭಾವ ಮೆರೆದರು. ಮುತೈದೆಯರು ಆರತಿಯೊಂದಿಗೆ ಸಾಗಿದರು ಗವಿಸಿದ್ದೇಶ್ವರರ ನಾಮಸ್ಮರಣೆ ಮಾಡುತ್ತಾ ಒಂದೂವರೆ ಗಂಟೆ ಪಾದಯಾತ್ರೆ ಮಾಡಿ ಭಕ್ತಿಭಾವ ಮೆರೆದರು.
ಈ ಸಂಧರ್ಭದಲ್ಲಿ ಅಂಬಲಝೆರಿಯ ಜ್ಞಾನಮಯಾನಂದ ಸ್ವಾಮೀಜಿ, ಮುಧೋಳ ಸಿದ್ದಾರೂಢ ಮಠದ ಸಿದ್ದರಾಮ ಸ್ವಾಮಿಗಳು ಮುಖಂಡರಾದ ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಸಿದ್ದು ಕೊಣ್ಣೂರ,ಮಹಾಂತೇಶ ಹಿಟ್ಟಿನಮಠ, ರವಿಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಶಂಕರಗೌಡ ಪಾಟೀಲ,ಶೇಖರ ಅಂಗಡಿ, ಕೃ?ಗೌಡ ಪಾಟೀಲ,ಮಲ್ಲಪ್ಪ ಭಾವಿಕಟ್ಟಿ,ಚಂದ್ರು ಗೊಂದಿ,ಅಶೋಕ ಅಂಗಡಿ, ಜಿ ಎಸ್ ಗೊಂಬಿ,ನಜಿರ ಅತ್ತಾರ, ನಬಿ ಯಕಃಸಂಬಿ, ಮಹೇಬೂಬ ಜಿರಗಾಳ,ಬಸವರಾಜ್ ರಾಯರ, ವಿ?ಗೌಡ ಪಾಟೀಲ, ವಿಠಲಗೌಡ ಪಾಟೀಲ, ಮಹಾಲಿಂಗಯ್ಯ ಮಣ್ಣಯ್ಯನವರಮಠ. ಜಯವಂತ ಬಾಡಗಿ,ಅರ್ಜುನಗೌಡ ಪಾಟೀಲ,ಕಲ್ಲಪ್ಪ ಚಿಂಚಲಿ, ಪ್ರಕಾಶ ಅರಳಿಕಟ್ಟಿ, ಮಲ್ಲಪ್ಪ ಸೈದಾಪುರ, ಮಲ್ಲಪ್ಪ ಸಿಂಗಾಡಿ, ರಾಮಣ್ಣ ಸಂಶಿ, ಸಂಜು ಅಂಗಡಿ, ಶ್ರೀಶೈಲ ರೊಡ್ಡಣ್ಣವರ, ಸಂಜು ಶಿರೊಳ, ಮನೋಹರ ಶಿರೋಳ, ಸಂಗಪ್ಪ ಗಡಗಿ, ಶ್ರೀಶೈಲ್ ಕಾರಜೋಳ, ಮಲ್ಲು ಯರಡ್ಡಿ, ಸೇರಿ ಸಾವಿರಾರು ಭಕ್ತರು ಭಾಗವಹಿಸಿದರು.
ಸದ್ಭಾವನಾ ಯಾತ್ರೆಯಲ್ಲೂ ಭಾವೈಕ್ಯೆತೆ ಮೆರೆದ ಭಾವಜೀವಿಗಳು


