25ರಂದು ರಾಜ್ಯಮಟ್ಟದ  ಕನ್ನಡ ನುಡಿ ಚಿಂತನ ಕಮ್ಮಟ    ಗಡಿನಾಡಿನಲ್ಲಿ ಕನ್ನಡ ಡಿಂಡಿಮ  ಆಮಂತ್ರಣ ಪತ್ರಿಕೆ ಬಿಡುಗಡೆ 

Pratibha Boi
25ರಂದು ರಾಜ್ಯಮಟ್ಟದ  ಕನ್ನಡ ನುಡಿ ಚಿಂತನ ಕಮ್ಮಟ    ಗಡಿನಾಡಿನಲ್ಲಿ ಕನ್ನಡ ಡಿಂಡಿಮ  ಆಮಂತ್ರಣ ಪತ್ರಿಕೆ ಬಿಡುಗಡೆ 
WhatsApp Group Join Now
Telegram Group Join Now
ಅಥಣಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸರ್ ಎಂ ವಿಶ್ವೇಶ್ವರಯ್ಯ ಗ್ರಾಮೀಣ ಮತ್ತು ನಾಗರಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ  ಇವುಗಳ ಸಂಯುಕ್ತ ಆಶ್ರಯದಲ್ಲಿ  ಗಡಿನಾಡಿನಲ್ಲಿ ಕನ್ನಡ ಡಿಂಡಿಮ ನುಡಿ ಚಿಂತನ ಕಮ್ಮಟ, ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ  ಬರುವ ಮಂಗಳವಾರ ದಿ. 25 ರಂದು ಬೆಳಿಗ್ಗೆ 10 ಗಂಟೆಗೆ  ಇಲ್ಲಿನ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಭಾಭವನದಲ್ಲಿ  ಜರುಗಲಿದೆ ಎಂದು  ಕಾಲೇಜಿನ ಪ್ರಾಚಾರ್ಯ  ವಿಲಾಸ್ ಎನ್ ಕಾಂಬಳೆ ಹೇಳಿದರು.
  ಅವರು ಅಥಣಿ ಪಟ್ಟಣದಲ್ಲಿ ಶುಕ್ರವಾರ ಗಡಿನಾಡಿನಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ  ಮಾತನಾಡಿದರು. 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಡಿ ಭಾಗದಲ್ಲಿನ ಕನ್ನಡ ಮತ್ತು ಮರಾಠಿ ಬಾಂಧವ್ಯ, ಗಡಿ ಭಾಗದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ  ಚಿಂತನ ಮಂತನ ನಡೆಸುವ ಕಾರ್ಯಕ್ರಮ ಇದಾಗಿದೆ. ಈ ಸಮಾರಂಭವನ್ನು  ಬೆಳಗಾವಿಯ ರಂಗಕರ್ಮಿ  ಡಾ. ಡಿ.ಎಸ್ ಚೌಗುಲೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ  ವಿಮೋಚನಾ ಸಂಸ್ಥೆಯ ಅಧ್ಯಕ್ಷರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಬಿ ಎಲ್ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ  ಡಾ. ಸಂತೋಷ ಹಾನಗಲ್ಲ, ಉಪನ್ಯಾಸಕರಾಗಿ ಸಿಂಧನೂರು ಕಾಲೇಜಿನ ಡಾ. ದೇವೇಂದ್ರಪ್ಪ ಜಾಜಿ, ಕನ್ನಡ ವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶನ ದ್ರಾಕ್ಷಾಯಿಣಿ ಹುಡೇದ ಆಗಮಿಸಲಿದ್ದಾರೆ.
 ಪ್ರಥಮ ಚಿಂತನಾಗೋಷ್ಠಿಯಲ್ಲಿ  ಗಡಿನಾಡು ಕರ್ನಾಟಕ ಏಕೀಕರಣದ ಕುರಿತು  ಸವದತ್ತಿಯ ಹಿರಿಯ ಸಾಹಿತಿ  ಡಾ. ವೈ ಎಂ ಯಾಕೊಳ್ಳಿ, ಬೆಳಗಾವಿ ದಲಿತ ಸಾಹಿತ್ಯ ಮತ್ತು ಕನ್ನಡ ಪರಂಪರೆ ಕುರಿತು  ಜಾದವಜಿ ಮಹಾವಿದ್ಯಾಲಯದ ಡಾ. ಪ್ರಿಯಂವದಾ ಹುಲಗಬಾಳಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಜರುಗುವ  ಎರಡನೇ ಗೋಷ್ಠಿಯಲ್ಲಿ  ಅಥಣಿಯ ಅನುವಾದಕರು ಹಾಗೂ ಹಿರಿಯ ಸಾಹಿತಿ ಡಾ.ಜೆ.ಪಿ ದೊಡಮನಿ ಅವರು ಕನ್ನಡ ಮತ್ತು ಮರಾಠಿ ಅನುವಾದ ಪರಂಪರೆ ಕುರಿತು  ಮತ್ತು ಹುನಗುಂದ ಮಹಾವಿದ್ಯಾಲಯದ  ಸಹಾಯಕ ಪ್ರಾಧ್ಯಾಪಕ  ಡಾ. ಸಂತೋಷ ನಾಯಕ ಅವರು ಮಹಿಳಾ ಆತ್ಮಕಥೆಗಳು ಮತ್ತು ಕನ್ನಡ ಭಾಷಾ ಸಂರಚನೆ  ಕುರಿತು ಚಿಂತನೆಗಳನ್ನು  ಮಂಡಿಸಲಿದ್ದಾರೆ. ಸಾಯಂಕಾಲ 04 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಸರ್ ಎಂ ವಿಶ್ವೇಶ್ವರಯ್ಯ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ  ಅಧ್ಯಕ್ಷ ಅನಿಲ್ ಕಾಂಬಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ  ಸಾಹಿತಿ  ಡಾ. ಸರಜು ಕಾಟ್ಕರ್, ಅತಿಥಿಗಳಾಗಿ ಪ್ರಾಚಾರ್ಯ ವಿಲಾಸ್ ಕಾಂಬಳೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ  ಉಂಡಾಡಿ ಸಂತೋಷ, ಉಪನ್ಯಾಸಕರಾದ ವಿಜಯ ಕಾಂಬಳೆ, ಡಾ. ಶಿಲ್ಪಾ ರಾಮನಗೋಳ, ಮಹಾಲಕ್ಷ್ಮಿ ಗೌಡ, ಡಾ. ರಾಮಣ್ಣ ದೊಡ್ಡನಿಂಗಪ್ಪಗೋಳ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು, ಸಾಹಿತಿಗಳು, ಕನ್ನಡ ಪರ ಹೋರಾಟಗಾರರು  ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈ ಕನ್ನಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ  ಸರ್ ಎಂ ವಿಶ್ವೇಶ್ವರಯ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ  ಅನಿಲ ಕಾಂಬಳೆ, ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ, ಉಂಡಾಡಿ ಸಂತೋಷ, ವಿಜಯ ಕಾಂಬಳೆ, ಪಿ ಎಲ್ ಪೂಜಾರಿ, ರಾವಸಾಬ  ಅಂಬಿ , ಪ್ರವೀಣ ಚುಬಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article