ಬಳ್ಳಾರಿ. ನ. 22::. ಹೆಣ್ಣು ಆರೋಗ್ಯದ ಕಣ್ಣು ಉತ್ತಮವಾದ ಅಡುಗೆಯನ್ನು ಮಾಡಿ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವುದು ಹೆಣ್ಣು, ಅಡುಗೆಯಲ್ಲಿ ಪೌಷ್ಟಿಕಾಂಶಯುಕ್ತ ಮೊಳಕೆ ಕಾಳು ಮತ್ತು ಹಸಿ ತರಕಾರಿಗಳಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಕುಟುಂಬದ ಮಹಿಳೆ ಈ ಉತ್ತಮವಾದ ಗುಣಮಟ್ಟದ ಆಹಾರವನ್ನು ತಯಾರಿಸಿದಲ್ಲಿ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡಾ. ವೀಣಾ ಕೆ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಅವರು ಇಂದು ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತರಾಗಿದ್ದಲ್ಲಿ ಕುಟುಂಬವನ್ನು ಆರೋಗ್ಯವಾಗಿಡಬಹುದು ಅತ್ಯಂತ ವಿಶೇಷವಾಗಿ ಮಹಿಳೆಯರ ಆರೋಗ್ಯದಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಗಂಡದ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿವೆ ಇವುಗಳನ್ನು ಮುಂಜಾಗ್ರತ ಕ್ರಮವಾಗಿ ಅದರಲ್ಲೂ ಮಹಿಳೆಯರ ಗರ್ಭಕಂಠ ಕ್ಯಾನ್ಸರನ್ನು ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಅತ್ಯಕ್ಕಬಹುದು ಎಲ್ಲರೂ ಈ ವ್ಯಾಕ್ಸಿನನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಯೋಜನಾಧಿಕಾರಿ ರೋಹಿತಾಕ್ಷ, ರೈತರು ಮತ್ತು ಮಹಿಳೆಯರ ಜೀವನ ಸುಧಾರಣೆಗಾಗಿ ಅಮ್ಮ ಹೇಮಾವತಿ ಹೆಗ್ಗಡೆಯವರು ಈ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಕಳೆದ 30 ವರ್ಷಗಳ ಹಿಂದೆ ತಾಲೂಕ ಮಟ್ಟದಲ್ಲಿ ಆಯೋಜಿಸಿದ್ದರು ಮಹಿಳೆಯರಿಗೆ ಕಾನೂನು ಸೌಲಭ್ಯ ಸ್ವಾವಲಂಬಿ ಜೀವನ ವಿದ್ಯೆ ಉದ್ಯೋಗ ಕುಟುಂಬ ನಿರ್ವಹಣೆ ಸೇರಿದಂತೆ ಐದಾರು ವಿಷಗಳೊಂದಿಗೆ ಆರಂಭವಾದ ಈ ಯೋಜನೆ ಜನಪದ ಶೈಲಿಯಲ್ಲಿ ಬಾಯಿಂದ ಬಾಯಿಗೆ ಹರಡಿ ಇಂದು ರಾಜ್ಯಾದ್ಯಂತ ಗೃಹದಾಕಾರವಾಗಿ ಬೆಳೆದು ನಿಂತಿದೆ ಸುಮಾರು 4,56,000 ಸಂಘಗಳಿಂದ ಕೂಡಿದ ಈ ಸಂಸ್ಥೆ ಶೇಕಡಾ 90% ಮಹಿಳಾ ಮಣಿಗಳನ್ನು ಹೊಂದಿದೆ 51 ಲಕ್ಷ ಸದಸ್ಯರಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರಿದ್ದಾರೆ, ಮಹಿಳೆಯರ ಜೀವನ ಅಭಿವೃದ್ಧಿಯೇ ಧರ್ಮಸ್ಥಳ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ಪ್ರಾಜೆಕ್ಟ್ ಅಧಿಕಾರಿ ಸೇರಿದಂತೆ, ಬಳ್ಳಾರಿ-1 ಘಟಕದ ಅಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಬಳ್ಳಾರಿ ತಾಲೂಕಿನಲ್ಲಿ ಮಹಿಳಾ ಸಂಘಟನೆಗಳ ಬಲವರ್ಧನೆಗೆ ಈ ವಿಚಾರಗೋಷ್ಠಿ ಮತ್ತೊಂದು ಹೆಜ್ಜೆ ಎಂದೂ ಭಾಗವಹಿಸಿದ ಮಹಿಳೆಯರು ಅಭಿಪ್ರಾಯ ಪಟ್ಟರು. ಈ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಜನಾರ್ದನ ರೆಡ್ಡಿ ಸದಸ್ಯರಾದ ಜಿ ನಾಗರಾಜ ರೆಡ್ಡಿ ಪುಷ್ಪಲತಾ ರೂಪಶ್ರೀ ವೀಣಾ ಕುಮಾರಿ ರಂಗಭೂಮಿ ಕಲಾವಿದರು ಕರ್ನಾಟಕ ಗ್ರಾಮೀಣ ಅಧಿಕಾರಿಗಳಾದ ಜಯಶ್ರೀ ಸೌಜನ್ಯ ಪ್ರಕಾಶ್ ರೆಡ್ಡಿ ಸೇರಿದಂತೆ ಇತರರಿದ್ದರು.


