ಅಥಣಿ: ನಾನೊಬ್ಬ ರಾಜಕಾರಣಿ, ಅಪೇಕ್ಷೆಗಳು ಇರುವದು ಸಹಜ, ಚಳಿಗಾಲ ಅಧಿವೇಶನ ಮುಗಿದ ನಂತರ ಇದರ ಬಗ್ಗೆ ಹೈಕಮಾಂಡ ಹಾಗೂ ಮುಖ್ಯಮಂತ್ರಿಗಳು ತಿರ್ಮಾಣ ತೆಗೆದುಕೊಳ್ಳುತ್ತಾರೆ. ನಾನು ಏನೆ ಹೇಳಿದರೂ ಅದು ಮುಂದಾಲೋಚಣೆ ಮಾಡಿಯೇ ಹೇಳಿರುತ್ತೇನೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅಥಣಿಯ ಗೃಹ ಕಛೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ನನಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಷಯ. ಬೇಡ ಅನ್ನುವುದಕ್ಕೆ ನಾನೇನು ಸನ್ಯಾಸಿ ಅಲ್ಲ, ನಾನು ರಾಜಕಾರಣಿ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಾಗಿ ಇರಲು ಬಯಸುವದಿಲ್ಲ, ಸಮಯ ಎಲ್ಲವನ್ನು ನಿರ್ಧರಿಸುತ್ತದೆ. ನಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಕೂಡಿ ಚರ್ಚೆ ಮಾಡಿದಾಗ ಯಾರಿಗೆ ಸಚಿವ ಸ್ಥಾನ ನೀಡಬೇಕು ಅನ್ನುವದು ತೀರ್ಮಾನ ಆಗುತ್ತದೆ. ಚಳಿಗಾಲದ ಅಧಿವೇಶನ ಮುಗಿದ ನಂತರ ಆಗಬಹುದು ಎನ್ನುವದು ನನ್ನ ಅಭಿಪ್ರಾಯ. ನೂತನ ಸಚಿವ ಸಂಪುಟ ರಚನೆ ಬಗ್ಗೆ ಸದ್ಯಕ್ಕೆ ಯಾವುದೇ ಚಟುವಟಿಕೆಗಳು ನಡೆದಿಲ್ಲ ಅನ್ನುವ ಮಾಹಿತಿ ಇದೆ ಎಂದು ಹೇಳಿದರು
ಸಚಿವ ಸ್ಥಾನ ಬೇಡ ಅನ್ನೋದಕ್ಕೆ ನಾನೇನು ಸನ್ಯಾಸಿಯಲ್ಲ : ಶಾಸಕ ಲಕ್ಷಣ ಸವದಿ


