ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ

Pratibha Boi
ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ
WhatsApp Group Join Now
Telegram Group Join Now

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾ ಪಟುಗಳು ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇತ್ತೀಚಿಗೆ ರಾಜ್ಯ ಸರಕಾರ ಹಾಗೂ ರಾಜ್ಯ ಒಲಂಪಿಕ್ಸ್ ಸಂಸ್ಥೆಯ ನೇತೃತ್ವದಲ್ಲಿ ನಡೆದ ೦೪ ನೇ ಮಿನಿ ವುಶು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಟ್ಟಣದ ಸೌಮ್ಯ ಮಂಜುನಾಥ ಶೆಟ್ಟಿ ೫೬ ಕೆ.ಜಿ ತೂಕದ ವಿಭಾಗದಲ್ಲಿ ಚಿನ್ನ, ನಿಖಿತಾ ಬಸಪ್ಪ ಶಿಗಿಹಳ್ಳಿ ೩೯ ಕೆಜಿ ವಿಭಾಗದಲ್ಲಿ ಚಿನ್ನ, ಪ್ರೀತಮ ಪ್ರಕಾಶ ಮಿರಜಕರ ೫೨ ಕೆಜಿ ವಿಭಾಗದಲ್ಲಿ ಚಿನ್ನ, ಪ್ರಿಯಾಂಕಾ ಮಡಿವಾಳಪ್ಪ ಪಟ್ಟಣಶೆಟ್ಟಿ ೪೫ ಕೆಜಿ ವಿಭಾಗದಲ್ಲಿ ಬೆಳ್ಳಿ, ಯುವರಾಜ ಪ್ರಭುದೇವ ಮೇದಾರ ೪೫ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಪಟ್ಟಣಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ ಇವರನ್ನು ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ತರಬೇತುದಾರ ಸಂತೋ? ಪರಶುರಾಮ ಜೀರನಾಳೆ ಹಾಗೂ ಪಟ್ಟಣದ ನಾಗರಿಕರು ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article