ಬೆಳಗಾವಿ : ಕಾಗವಾಡ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 07 ಅಂಗನವಾಡಿ ಕಾರ್ಯಕರ್ತೆ ಹಾಗೂ 28 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆವ್ಹಾನಿಸಲಾಗಿತ್ತು. ಸದರಿ ಹುದ್ದೆಗಳಿಗೆ ಸಂಬಂದಿಸಿದ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿರುತ್ತದೆ. ತಾತ್ಕಾಲಿಕವಾಗಿ ಆಯ್ಕೆಯಾದ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಾಲಿಕ ಪಟ್ಟಿಯನ್ನು ಕಾಗವಾಡ ಶಿಶು ಅಭಿವೃದ್ಧಿ ಯೋಜನಾ ಕಛೇರಿಯ ಸೂಚನಾ ಫಲಕದ ಮೇಲೆ, ತಹಶೀಲ್ದಾರರ ಕಛೇರಿ, ತಾಲೂಕ ಪಂಚಾಯತ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಂಬಂದ ಪಟ್ಟ ಅಂಗನವಾಡಿ ಕೇಂದ್ರ, ಶಾಲೆ, ಗ್ರಾಮ/ಪಟ್ಟಣ ಪಂಚಾಯತ/ಪುರಸಭೆ ಗಳ ಸೂಚನಾ ಫಲಕಗಳ ಮೇಲೆ ಪ್ರಕಟಿಸಲಾಗಿದೆ. ಸದರಿ ಹುದ್ದೆಗಳ ಆಯ್ಕೆಯ ಬಗ್ಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ: 29-11-2025 ರಂದು ಸಂಜೆ 5:30 ಗಂಟೆಯೊಳಗೆ ಸೂಕ್ತ ದಾಖಲಾತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನೆ ಕಾಗವಾಡ, ಸುರೇಶ ಪಾಟೀಲ ಬಿಲ್ಡಿಂಗ್, ಗಣೇಶವಾಡಿ ರೋಡ ಕಾಗವಾಡ ಇಲ್ಲಿಗೆ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಬಹುದು. ತದನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಕಾಗವಾಡ ದೂರವಾಣಿ ಸಂಖ್ಯೆ: 08339-264977 ಇವರನ್ನು ರಜಾ ದಿನಗಳನ್ನು ಹೊರತುಪಡಿಸಿ ಕಛೇರಿ ವೇಳೆಯಲ್ಲಿ ಸಂರ್ಪಕಿಸಬಹುದು ಎಂದು ಕಾಗವಾಡದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ. ರವೀಂದ್ರ ವಿ. ಗುದಗೆನ್ನವರ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

