ಹಸಿರು ಕಾಂತ್ರಿ: ಎಂ.ಕೆ.ಹುಬ್ಬಳ್ಳಿ:ಪಟ್ಟಣದಲ್ಲಿ ಡಿ. ೨೮ ರಂದು ನಡೆಯಲಿರುವ ಚ.ಕಿತ್ತೂರು ತಾಲೂಕಾ ಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾದರವಳ್ಳಿಯ ಸೀಮಿಮಠದ ಪೂಜ್ಯ ಶ್ರೀ ಡಾ.ಪಾಲಾಕ್ಷ ಮಹಾಸ್ವಾಮೀಜಿ ಆಯ್ಕೆಯಾಗಿದ್ದಾರೆ.
ಚ.ಕಿತ್ತೂರು ಕಲ್ಮಠದ ಆವರಣದಲ್ಲಿ ಕಲ್ಮಠದ ಆವರಣದಲ್ಲಿ ಇತ್ತೀಚೆಗೆ ಪೂಜ್ಯಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಿತ್ತೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ಮಾಡಲಾಯಿತು.
ಕಾದರವಳ್ಳಿ ಪಾಲಾಕ್ಷ ಶ್ರೀಗಳು ಸ್ನಾತಕೋತ್ತರ ಪದವಿಯೊಂದಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕಾದರವಳ್ಳಿ ನೀಮಿಮಠದ ಮೂಲಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಡಿಸೆಂಬರ ಮೊದಲ ವಾರದಲ್ಲಿ ಪೂಜ್ಯರಿಗೆ ಆಮಂತ್ರಣ ನೀಡಲಾಗುವುದು ಎಂದು ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಿಳಿಸಿದ್ದಾರೆ.
ಈ ವೇಳೆ ಪದಾಧಿಕಾರಿಗಳಾದ ಮಂಜುನಾಥ ಕಳಸಣ್ಣವರ, ಮಹೇಶ ಚನ್ನಂಗಿ, ಬಿ.ಸಿ.ಬಿದರಿ, ಡಾ.ಶೇಖರ ಹಲಸಗಿ, ಡಾ.ಜಗದೀಶ ಹಾರೂಗೊಪ್ಪ, ಎಂ.ಎಸ್.ಕಲ್ಮಠ, ರಾಘವೇಂದ್ರ, ರಾಜಶೇಖರ ರಗಟಿ, ಮಹೇಶ್ವರ ಹೊಂಗಲ, ಪ್ರಭಾ ಲದ್ದಿಮಠ, ಸುನಂದಾ ಜೋಶಿ ಸೇರಿದಂತೆ ಅನೇಕರು ಇದ್ದರು.


