ನ.21ರಿಂದ ನೆರೆ ಹೊರೆಯವರ  ಹಕ್ಕುಗಳ ಕುರಿತು ದೇಶವ್ಯಾಪಿ ಅಭಿಯಾನ: ಜಮಾತ್-ಎ-ಇಸ್ಲಾಮಿ ಹಿಂದ್

Ravi Talawar
ನ.21ರಿಂದ ನೆರೆ ಹೊರೆಯವರ  ಹಕ್ಕುಗಳ ಕುರಿತು ದೇಶವ್ಯಾಪಿ ಅಭಿಯಾನ: ಜಮಾತ್-ಎ-ಇಸ್ಲಾಮಿ ಹಿಂದ್
WhatsApp Group Join Now
Telegram Group Join Now

ಸಯ್ಯದ್ ಸಾದತುಲ್ಲಾ ಅವರು ಮುಂದುವರೆದು  “ಸೌಹಾರ್ದಪೂರ್ಣ ನೆರೆ ಹೊರೆಯವರ   ಸಂಬಂಧಗಳ ಮೇಲೆ ನಿರ್ಮಾಣವಾದ ಸಮಾಜ ಸ್ವಾಭಾವಿಕವಾಗಿ ಆದರ್ಶ ಸಮಾಜವಾಗುತ್ತದೆ. ಅಕ್ಕ ಪಕ್ಕದವರು ಪರಸ್ಪರ ದಯೆ, ಕ್ಷಮೆ ಮತ್ತು ನ್ಯಾಯದೊಂದಿಗೆ ವರ್ತಿಸಿದಾಗ ಅದು ಸಮಗ್ರ ಸಮುದಾಯಗಳ ರೂಪಾಂತರಕ್ಕೆ ಕಾರಣವಾಗುವ ಅಲೆ ಪರಿಣಾಮವನ್ನು ಉಂಟುಮಾಡುತ್ತದೆ. ಈ ಅಭಿಯಾನವು . ಅಕ್ಕ ಪಕ್ಕದವರ ನಡುವಿನ ಸಂಘರ್ಷಗಳನ್ನು ಪರಿಹರಿಸುವುದಷ್ಟೇ ಅಲ್ಲದೆ, ಇಸ್ಲಾಮಿನ ಕರುಣೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೌಲ್ಯಗಳನ್ನು ಬಲವಾಗಿ ಸಮಾಜದ ಮುಂದೆ ತೋರಿಸುವುದಾಗಿ ನಾವು ನಿರೀಕ್ಷಿಸುತ್ತೇವೆ.”

“ನೆರೆ ಹೊರೆಯವರ ಹಕ್ಕುಗಳ ಅಭಿಯಾನ” ದ ರಾಷ್ಟ್ರೀಯ ಸಂಯೋಜಕರಾದ ಮೊಹಮ್ಮದ್ ಅಹ್ಮದ್ ಅವರು, ನಗರೀಕರಣದ ಬೆಳವಣಿಗೆಯೊಂದಿಗೆ ವ್ಯಕ್ತಿಕೇಂದ್ರಿತ ಜೀವನಶೈಲಿ ಹೆಚ್ಚಾಗಿದ್ದು, ಅಕ್ಕ ಪಕ್ಕದವರ ಸಂಬಂಧಗಳು ನಿರ್ಲಕ್ಷ್ಯಗೊಳ್ಳುತ್ತಿರುವ ವಿಷಯವನ್ನು ಈ ಅಭಿಯಾನ ಸ್ಪರ್ಶಿಸುತ್ತದೆ ಎಂದು ವಿವರಿಸಿದರು. ಪರಸ್ಪರ ಕರುಣೆ, ಸಹಕಾರ, ಸ್ವಚ್ಛತೆ ಮತ್ತು ಸಂಚಾರ ನಿಯಮಗಳ ಗಳಂತಹ ಶಿಸ್ತಿನ ಮೌಲ್ಯಗಳನ್ನು ಇಸ್ಲಾಮಿಕ್ ಸಾಮಾಜಿಕ ಜವಾಬ್ದಾರಿಗಳ ಭಾಗವಾಗಿ ಉತ್ತೇಜಿಸುವುದು ಇದರ ಉದ್ದೇಶವೆಂದು ಅವರು ಹೇಳಿದರು.

ಅಭಿಯಾನದಲ್ಲಿ ವಿವಿಧ ಕಾರ್ಯಕ್ರಮಗಳು ಈ ತರಹ ಇರಲಿವೆ: ಎಲ್ಲಾ ಧರ್ಮಗಳ ಅಕ್ಕ ಪಕ್ಕದವರೊಂದಿಗೆ ಸಭೆಗಳು, ಚಹಾ ಕೂಟಗಳು, ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷ ಕಾರ್ಯಕ್ರಮಗಳು, ಸಮುದಾಯ ಸ್ವಚ್ಛತಾ ಅಭಿಯಾನಗಳು, ರಸ್ತೆ ಹಕ್ಕುಗಳ ಬಗ್ಗೆ ಜಾಗೃತಿ ರ್ಯಾಲಿಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮುಸ್ಲಿಮೇತರ ಸಹೋದರ–ಸಹೋದರಿಯರನ್ನು ಸೇರಿಕೊಳ್ಳುವಿಕೆಗೆ ವಿಶೇಷ ಒತ್ತು ನೀಡಲಾಗುತ್ತದೆ, ಅಂತರಧಾರ್ಮಿಕ ಸೌಹಾರ್ದವನ್ನು ಬಲಪಡಿಸಲು ಮತ್ತು ಇಸ್ಲಾಂ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು  ಜೊತೆಗೆ ‘ನಿಮ್ಮ ಅಕ್ಕ ಪಕ್ಕದವರನ್ನು ತಿಳಿಯಿರಿ’ ಕಾರ್ಯಕ್ರಮಗಳು, ಅಕ್ಕ ಪಕ್ಕದವರ ಸಾಂಸ್ಕೃತಿಕ ಕೂಟಗಳು ಮತ್ತು ಅಭಿಯಾನದ ನಂತರವೂ ಸಂವಹನ ಮುಂದುವರಿಯಲು ಸ್ಥಳೀಯ ಸಮಿತಿಗಳ ರಚನೆಯೂ ಇರಲಿದೆ.

 

WhatsApp Group Join Now
Telegram Group Join Now
Share This Article