ಎಮ್.ಕೆ.ಹುಬ್ಬಳ್ಳಿ: ಇಂದು ಎಮ್.ಕೆ. ಹುಬ್ಬಳ್ಳಿ ಕ್ಲಸ್ಟರ್ ಮಟ್ಟದ 2025-26 ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶುಗರ್ ಪ್ಯಾಕ್ಟರಿ ಕಲ್ಮೇಶ್ವರ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ವೈ. ತುಬಾಕದ ರವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆ ಸಹಾಯಕವಾಗಲಿ ಎಂದು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದಯ್ಯ ಹಿರೇಮಠ, ಕೆ. ಜಿಗಡಾದ, ಮಂಜುನಾಥ ಶೆಟ್ಟನ್ನವರ, ರಾಜೇಶ್ವರಿ ಶೇಬನ್ನವರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಠ್ಠಲ ನನ್ನೂರ, ಪಿ.ಬಿ. ಗಣಾಚಾರಿ, ಶಂಕರ ಕಳಸಣ್ಣವರ, ಸುರೇಶ ಗುಂಡೆನ್ನವರ, ಸಿಆರ್ಪಿ ವಿನೋದ ಪಾಟೀಲ ಹಾಗೂ ಕ್ಲಸ್ಟರ್ನ ಶಿಕ್ಷಕರು ಉಪಸ್ಥಿತರಿದ್ದರು.


