ಲೇಖಕ ಸಿದ್ದರಾಮ‌ ಕಲ್ಮಠಗೆ ಬಿ.ಎಂ.ಶ್ರೀ .ಪುಸ್ತಕ ಪ್ರಶಸ್ತಿ ಪ್ರದಾನ

Ravi Talawar
ಲೇಖಕ ಸಿದ್ದರಾಮ‌ ಕಲ್ಮಠಗೆ ಬಿ.ಎಂ.ಶ್ರೀ .ಪುಸ್ತಕ ಪ್ರಶಸ್ತಿ ಪ್ರದಾನ
WhatsApp Group Join Now
Telegram Group Join Now
ಬಳ್ಳಾರಿ: ನ.20:  ಲೇಖಕ ಸಿದ್ದರಾಮ‌ ಕಲ್ಮಠ ಅವರ “ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ” ಕೃತಿಗೆ ಬಿ.ಎಂ.ಶ್ರೀ. ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಬುದ್ದ ಬಸವ ಗಾಂಧಿ ಟ್ರಸ್ಟ್ ವತಿಯಿಂದ ನಡೆದ ರಾಜ್ಯಮಟ್ಟದ 6ನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಸಿದ್ದರಾಮ ಕಲ್ಮಠ ಅವರು,ಈ ಕೃತಿಯು ಕರ್ನಾಟಕ ಏಕೀಕರಣದಲ್ಲಿ ಬಲಿದಾನವಾದ ಒಬ್ಬ ವ್ಯಕ್ತಿಯ ಕಥನವಾದರೂ ಆ ಸಂದರ್ಭದ ಹಲವು ಸಂಗತಿಗಳನ್ನು ಈ ಕೃತಿಯು ದಾಖಲಿಸುತ್ತದೆ.ಅಪಾರ ಓದುಗರು ಪುಸ್ತಕವನ್ನು ಕೊಂಡು ಓದುವ ಮೂಲಕ ನಿಜವಾದ ಪ್ರಶಸ್ತಿ ನೀಡಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಪ್ರಗತಿಪರ ಚಿಂತಕಿ ಬಿ.ಇಂದಿರಾ ಕೃಷ್ಣಪ್ಪ,ಲೇಖಕಿ ಪುಷ್ಪಾ ಬಸವರಾಜ್ ,ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ ( ಸಿಸಿರಾ),ಸಾಹಿತಿ ಸುರೇಶ್ ಕೋರೆಕೊಪ್ಪ,ಕರ್ನಾಟಕ ಲೇಖಕಿಯರ ಸಂಘದ ಖಜಾಂಚಿ ಮಂಜುಳಾ ಶಿವಾನಂದ ಸೇರಿದಂತೆ ಹಲವರಿದ್ದರು.
WhatsApp Group Join Now
Telegram Group Join Now
Share This Article