ಕಾಗವಾಡ: ತಾಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿಯ ಕಿರಾಣಿ ಅಂಗಡಿಗಳಲ್ಲಿ ಮಧ್ಯೆ ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಅಬಕಾರಿ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ. ಇನ್ನೂ ಕಿರಾಣಿ ಅಂಗಡಿ ಮಾಲೀಕರನ್ನು ಈ ಕುರಿತು ಪ್ರಶ್ನೇ ಮಾಡಿದರೇ ನಾವು ಹಪ್ತಾ ನೀಡುತ್ತೇವೆ ಎಂದು ಉತ್ತರಿಸುತ್ತಿದ್ದಾರೆ.
ತಾಲೂಕಿನ ಕೆಂಪವಾಡ, ನವಲಿಹಾಳ, ಶಿರಗುಪ್ಪಿ ಸೇರಿದಂತೆ ಅನೇಕ ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಮಧ್ಯೆ ಮಾರಾಟ ನಿರಂತರವಾಗಿ ನಡೆಯುತ್ತಿರುವ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಜೊತೆಗೆ ಇನ್ನೂ ವಿವಿಧ ಗ್ರಾಮಗಳಲ್ಲಿ ಈ ರೀತಿ ಕಿರಾಣಿ ಅಂಗಡಿ, ಮನೆಗಳಲ್ಲಿ ಮಧ್ಯೆ ಮಾರಾಟ ನಡೆಯುತ್ತಿರುವುದು ಅಬಕಾರಿ ಅಧಿಕಾರಿಗಳ ನಡೆಯ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ಈ ಕುರಿತು ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೇ ಅವರು ಯಾವ ಕರೆಗಳನ್ನು ಸ್ವೀಕರಿಸುವುದಿಲ್ಲ. ಇದರಿಂದ ಅಧಿಕಾರಿಗಳೇ ಈ ರೀತಿ ಕಿರಾಣಿ ಅಂಗಡಿಗಳಲ್ಲಿ ಮಧ್ಯೆ ಮಾರಾಟಕ್ಕೆ ಪರವಾನಿಗೆ ನೀಡಿದ್ದಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತಾಲೂಕಿನಲ್ಲಿ ಸಾಕಷ್ಟು ವೈನ್ ಶಾಪ್‌ಗಳು, ಬಾರ್‌ಗಳಿದ್ದರೂ ಅಬಕಾರಿ ಇಲಾಖೆಯ ಟಾಗ್ರೆಟ್ ರಿಚ್ ಆಗುತ್ತಿಲ್ಲವೇ..? ಅಬಕಾರಿ ಅಧಿಕಾರಿಗಳು ತಮ್ಮ ಟಾಗ್ರೆಟ್ ರಿಚ್ ಮಾಡುವ ಉದ್ದೇಶದಿಂದ ತಾಲೂಕಿನ ಕೆಲ ಗ್ರಾಮಗಳ ಕಿರಾಣ ಅಂಗಡಿಗಳನ್ನೇ ಈಗ ವೈನ್ ಶಾಪ್‌ಗಳಾಗಿ ಮಾರ್ಪಾಡು ಮಾಡಿದ್ದಾರೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಜನನಿಭಿಡ ರಸ್ತೆ ಪಕ್ಕದ ಅಂಗಡಿಗಳಲ್ಲಿಯೇ ಮಧ್ಯೆ ಮಾರಾಟದಿಂದ ಕುಡುಕರ ಹಾವಳಿ ಹೆಚ್ಚಾಗಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಅಬಕಾರಿ ಅಧಿಕಾರಿಗಳು ಮಾತ್ರ ಮೌನ ವಹಿಸಿರಿವುದು ಸಂಶಯಕ್ಕೆ ಕಾರಣವಾಗಿದೆ.


