22ರಿಂದ ರಾಜ್ಯ-ರಾಷ್ಟ್ರಮಟ್ಟದ ಕಲಾಕೃತಿಗಳ ಪ್ರದರ್ಶನ

Pratibha Boi
WhatsApp Group Join Now
Telegram Group Join Now

ಬೆಳಗಾವಿ ನಗರದ ವರ್ಣ ಕಲಾ ಸಂಸ್ಕೃತಿಕ ಸಂಘ ಹಾಗೂ ಶ್ರೀ ಮಾತಾ ಗ್ಲಾಸ್ ಆರ್ಟ್ ಸಹಯೋಗದಲ್ಲಿ ತಿಲಕವಾಡಿ ಕಾಲ ಮಹರ್ಷಿ ಕೆ. ಬಿ. ಕುಲಕರ್ಣಿ ಆರ್ಟ್ ಗ್ಯಾಲರಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನ 22 ಮತ್ತು 23 ರಂದು ಚಿತ್ರಕಲಾ ಪ್ರದರ್ಶನ , ಚಿತ್ರ ಶಿಬಿರ, ರಾಜ್ಯ-ರಾಷ್ಟ್ರಮಟ್ಟದ ಕಲಾಕೃತಿಗಳ ಪ್ರದರ್ಶನ, ಕಲಾ ಪ್ರಾತ್ಯಕ್ಷಿಕೆ ಮತ್ತು ಸೆಮಿನಾರ್ ಹಮ್ಮಿಕೊಳ್ಳಲಾಗಿದೆ.

23ರಂದು ನಡೆಯುವ ಸಮಾರಂಭಲ್ಲಿ ಐದು ಜನ ಸಾಧಕ ಚಿತ್ರ ಕಲಾವಿದರಿಗೆ 2024-25ನೇ ಸಾಲಿನ ‘ವರ್ಣಕಲಾಶ್ರೀ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಹಿರಿಯ ಕಲಾವಿದರಾದ ದಿ.ಕೆ.ಬಿ. ಕುಲಕರ್ಣಿ, ದಿ.ಬಿ.ಕೆ.ಹುಬ್ಬಳ್ಳಿ, ದಿ.ಎಸ್ .ಬಿ.ಸುತಾರ, ದಿ.ಚಂದ್ರಕಾಂತ ಕುಸನೂರ ಮತ್ತು ದಿ.ಆರ್ .ಐ.ಸಾವಂತ ಅವರ ಸ್ಮರಣಾರ್ಥ ನೀಡಲಾಗುವ ‘ವರ್ಣಕಲಾಶ್ರೀ’ ಪ್ರಶಸ್ತಿಯನ್ನು ಬೆಳಗಾವಿಯ ಜಯಂತ ಬಿ. ಹುಬ್ಬಳ್ಳಿ, ವಿಜಯಪುರದ ರಮೇಶ ಚವ್ಹಾಣ, ಬೆಂಗಳೂರಿನ

ಅಶೋಕ ವಿ. ಭಂಡಾರೆ ,ಮೈಸೂರುನ ಜಯದೇವಣ್ಣ ಟಿ.ಎಸ್ .,ಕಲಬುರಗಿಯ ಡಾ. ರೆಹಮಾನ ಪಟೇಲ್ ಇವರುಗಳಿಗೆ ನೀಡಲಾಗುತ್ತಿದೆ. ಅಲ್ಲದೇ, ವಿಶ್ವಕಲಾ ದಿನಾಚರಣೆ ಮತ್ತು ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ ಪ್ರಶಸ್ತಿಯನ್ನು ವಿಜಯಪುರನ ಮಂಜುನಾಥ ಎನ್ . ವಾಲಿ ಹಾಗೂ ಧಾರವಾಡದ ಆರ್ಮಾ ಖಾನ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ವರ್ಣ ಕಲಾ ಸಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ ಚಿಮರೋಲ ಪ್ರಕಟಣೆಯಲ್ಲಿ ತಿಳಿಸಿದಾರೆ.
WhatsApp Group Join Now
Telegram Group Join Now
Share This Article