ಆವಿಷ್ಕಾರ ವೇದಿಕೆಯಿಂದ ಕುವೆಂಪುರವರ ಸ್ಮರಣ ದಿನ

Pratibha Boi
ಆವಿಷ್ಕಾರ ವೇದಿಕೆಯಿಂದ ಕುವೆಂಪುರವರ ಸ್ಮರಣ ದಿನ
WhatsApp Group Join Now
Telegram Group Join Now
ಕುರುಗೋಡು17.: ಸಮಾಜದಲ್ಲಿ ಮೇಲು-ಕೀಳು, ಜಾತಿ-ಧರ್ಮ, ಬಡವ-ಬಲ್ಲಿದ ಎಂಬ ಹಲವಾರು ರೀತಿಯ ಅಸಮಾನತೆಗಳನ್ನು ಕಾಣುತ್ತಿದ್ದೇವೆ, ಕುವೆಂಪು ಅವರು ಇದೆಲ್ಲದ ವಿರುದ್ಧ ಧ್ವನಿ ಎತ್ತಿದವರು, ಅವರು ಅಳುವ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲಿಲ್ಲ ಎಂದು ಆವಿಷ್ಕಾರ ವೇದಿಕೆ ಮುಖಂಡ ಗುರಳ್ಳಿ ರಾಜ ತಿಳಿಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಆವಿಷ್ಕಾರ ವೇದಿಕೆಯಿಂದ ಕುವೆಂಪು ಅವರ ಸ್ಮರಣದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಕಂಡ ತಪ್ಪನ್ನು, ತಪ್ಪು ಎಂದು ಎಂತಾ ಸಂಧರ್ಭದಲ್ಲಿಯೂ ಸಹ ನಿರೂಪಿಸುತ್ತಿದ್ದರು. ಮನುಷ್ಯ ತನ್ನ ಎಲ್ಲಾ ಸಂಕುಚಿತ ಇತಿಮಿತಿಗಳಿಂದ ಹೊರಬರಲು ಮತ್ತು ಅವನು ವಿಶ್ವಮಾನವನಾಗಲು ಕರೆನೀಡಿದರು. ಅವರ ಕರೆಯ ಆಶಯವನ್ನು ನಾವು ಗ್ರಹಿಸಿ, ಆ ದಿಕ್ಕಿನಕಡೆ ಸಾಗಬೇಕು, ಅದೇ ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಡಿವೈಓ ಯುವಜನ ಸಂಘದ ಅಧ್ಯಕ್ಷರು ಕೋಳೂರು ಪಂಪಾಪತಿ ಅವರೂ ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article