ಇಂಡಿ : ವೈಯಕ್ತಿಕವಾಗಿ ದೊಡ್ಡ ಪ್ರಮಾಣದಲ್ಲಿ ಮದುವೆಗಳನ್ನು ಆಯೋಜಿಸಲು ಆಗುವ ದುಬಾರಿ ಖರ್ಚುಗಳನ್ನು ಸಾಮೂಹಿಕ ವಿವಾಹ ಕಡಿಮೆ ಮಾಡುವದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಕಾರಿ ಎಂದು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರರು ಆಶೀರ್ವಚನ ನೀಡಿದರು.
ತಾಲೂಕಿನ ತಡವಲಗಾ ಜೋಡಗುಡಿಯಲ್ಲಿ ಶ್ರೀ ಮರುಳ ಸಿದ್ದೇಶ್ವರ ಜಾತ್ರೆ ನಿಮಿತ್ಯ ಹಮ್ಮಿಕೊಂಡ ಸಾಮೂಹಿಕ ವಿವಾಹ ಮತ್ತು ಸರ್ವ ದರ್ಮ ಸಭೆ ಉದ್ದೇಶಿಸಿ ಮಾತನಾಡಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ತಡವಲಗಾದ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ವಧು ವರರಿಗೆ ಉಡುಗೆ ಬಂಗಾರದ ಉಡುಗೊರೆ ನೀಡುವ ಜೊತೆಗೆ ಎರಡು ಕಡೆಯ ಬಂಧುಗಳಿಗೆ ಉಟೋಪಚಾರ ಮಾಡಿರುವ ಕಾರ್ಯ ಶ್ಲಾಘನೀಯ. ಸಾಮೂಹಿಕ ವಿವಾಹ ಕಾರ್ಯ ಬಡ ಮತ್ತು ಮಧ್ಯಮ ವರ್ಗದವರಿಗೆ ಪೂರಕ ಎಂದರು..
ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರರು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರರು, ಸಂಸದ ರಮೇಶ ಜಿಗಜಿಣಗಿ , ದೆಹಲಿ ನಿಕಟಪೂರ್ವ ಪ್ರತಿನಿಧಿ ಶಂಕರಗೌಡ ಪಾಟೀಲ , ಮಂಜುನಾಥ ವಂದಾಲ ಮಾತನಾಡಿದರು.
ಜಿಗಜಿಣಗಿಯ ಮುಪ್ಪಿನಾರ್ಯ ಶಿವಾಚಾರ್ಯರರು, ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ , ಮಳಸಿದ್ದಪ್ಪ ಖಸ್ಕಿ, ಡಾ|| ರಮೇಶ ಪೂಜಾರಿ, ಸಚೀನ ಇಂಡಿ, ಅಶೋಕ ಮಿರ್ಜಿ, ಅಪ್ಪಾಸಾಬ ಇಂಡಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ, ಅಣ್ಣಾರಾಯ ಮದರಿ , ನಾಗುಗೌಡ ಪಾಟೀಲ, ಚಂದ್ರಶೇಖರ ಹೂಗಾರ ಮತ್ತಿತರಿದ್ದರು.
ಹದಿನಾಲ್ಕು ನವಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.
“ಸಾಮೂಹಿಕ ವಿವಾಹ ಕಾರ್ಯ ಬಡ ಮತ್ತು ಮಧ್ಯಮ ವರ್ಗದವರಿಗೆ ಪೂರಕ”


