ಕಾರ್ತಿಕ ದೀಪೋತ್ಸವ

Pratibha Boi
ಕಾರ್ತಿಕ ದೀಪೋತ್ಸವ
WhatsApp Group Join Now
Telegram Group Join Now

ಇಂಡಿ : ಪಟ್ಟಣದ ಸಾಯಿ ಬಾಬಾ ದೇವಸ್ಥಾನದಲ್ಲಿ ಸಾಯಿ ಬಾಬಾರವರ ೧೦೦ ನೇ ಜನ್ಮ ದಿನದ ನಿಮಿತ್ಯ ಸಾಯಿ ಬಾಬಾ ಮಹಿಳಾ ಮಂಡಳ ವತಿಯಿಂದ ಕಾರ್ತಿಕ ದೀಪೋತ್ಸವ ಆಚರಿಸಲಾಯಿತು.
ಸಾಯಿ ಬಾಬಾರ ೧೦೦ ಜನ್ಮ ದಿನದ ನಿಮಿತ್ಯ ನೂರು ದೀಪಗಳನ್ನು ಹಚ್ಚಿ ದೀಪೋತ್ಸವ ಆಚರಿಸಲಾಯಿತು.
ಸಾಯಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗಂಗಾ ಗಲಗಲಿ ಮಾತನಾಡಿ ಮರ್ಯಾದಾ ಪುರಷೋತ್ತಮ ಶ್ರೀ ರಾಮ ವಿಜಯದ ಸಂಭ್ರಮ ಆಚರಣೆ ಭಾಗಿಯಾಗಿ ಕಾರ್ತಿಕ ಮಾಸದಲ್ಲಿ ಸರಯೂ ನದಿಯ ದಡದಲ್ಲಿ ಒಂದು ತಿಂಗಳ ಪರ್ಯಂತ ದೀಪೋತ್ಸವ ಮಾಡಲಾದ ಸಂಪ್ರದಾಯ ಮುಂದು ವರೆದಿದೆ ಎಂದರು.
ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಎಳ್ಳಿನ ಎಣ್ಣೆಯ ದೀಪವನ್ನು ಬೆಳಗಿಸುವ ವ್ಯಕ್ತಿಯು ಸಮೃದ್ದಿ ಸೌಂದರ್ಯ ಆಶಿರ್ವಾದ ಮತ್ತು ಸಂಪತ್ತನ್ನು ಪಡೆಯುತ್ತಾನೆ ಎಂಬ ಪ್ರತೀತಿ ಇದೆ ಎಂದರು.
ಅದರಂತೆ ಇಂಡಿಯಲ್ಲಿ ಹಳ್ಳ ಕೊಳ್ಳ ಬಾವಿ ನದಿಯಲ್ಲಿಯೂ ದೇವಸ್ಥನಗಳಲ್ಲಿಯೂ ದೀಪಗಳನ್ನು ಮಹಿಳೆಯರು ಹಚ್ಚಿ ಕಾರ್ತಿಕ ದೀಪೋತ್ಸವ ಆಚರಿಸುತ್ತಾರೆ ಎಂದರು.
ಮಾಯಾ ಸಾತಿಹಾಳ, ದ್ರಾಕ್ಷಾಯಿಣಿ ಹಂಜಗಿ, ವಿಜಯಲಕ್ಷ್ಮೀ ದೇಸಾಯಿ, ನಿರ್ಮಲ ಹಿರೇಮಠ, ಮಂಗಲಾ ನಿಗಡಿ, ಸುರೇಖಾ ಲಬ್ಬಾ, ನಂದಾ ನಿಗಡಿ, ಮಾನಂದಾಬಾಲಿ ಭವಾನಿ ಗುಳೆದಗುಡ್ಡ , ಕಲಾವತಿ ಯರನಾಳ, ಶಾಂತಲಾ ಫೋಪಡೆ, ಶೈಲಜಾ ಬಿರಾದಾರ, ಜಗದೇವಿ ಪಟ್ಟಣಶೆಟ್ಟಿ, ಭಾರತಿ ಪಾಟೀಲ ಮತ್ತಿತರಿದ್ದರು.

 

WhatsApp Group Join Now
Telegram Group Join Now
Share This Article