ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ವಿದ್ಯಾವರ್ಧಕ ಸಮಿತಿಯ ನ್ಯೂ ಇಂಗ್ಲೀಷ ಮಿಡಿಯಮ್ ಶಾಲೆಯ ವಿಧ್ಯಾರ್ಥಿನಿ ಸ್ವರಾ ಮಹೇಶ ಪಾಟೀಲ ಇವಳು ಗೋಕಾಕದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದ ಗುಂಡು ಎಸೆತದಲ್ಲಿ ದ್ವೀತಿಯ ಸ್ಥಾನ ಪಡೆದು, ಹಾಸನದಲ್ಲಿ ನಡೆಯುವ ರಾಜ್ಯ ಮಟ್ಟದಕ್ಕೆ ಆಯ್ಕೆಯಾಗಿರುತ್ತಾಳೆ.
ಸಾಧನೆ ಮಾಡಿದ ವಿದ್ಯಾರ್ಥಿನಿ ಸ್ವರಾ ಪಾಟೀಲ ಇವಳನ್ನು ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಶಾಲೆಯ ಪ್ರಾಂಶುಪಾಲರು, ಎಲ್ಲ ಗುರುಗಳು, ಸಮಿತಿಯ ಅಂಗ ಶಾಲೆಗಳ ಮುಖ್ಯ ಗುರುಗಳು ಸರ್ವ ಶಿಕ್ಷಕರು, ಕ್ರೀಡಾ ಶಿಕ್ಷಕರು ಹಾಗೂ ಎಲ್ಲ ವಿಧ್ಯಾರ್ಥಿಗಳು ಅಭಿನಂದಿಸಿದ್ದಾರೆ.


