ಅಥಣಿ : ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ಬೆಳಗಾವಿ ಇವರು ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ಕೊಡ ಮಾಡುವ ರಾಜ್ಯಮಟ್ಟದ “ಸುವರ್ಣ ಕರ್ನಾಟಕ ಶಿಕ್ಷಣ ರತ್ನ” ಪ್ರಶಸ್ತಿಗೆ ಪಟ್ಟಣದ ವಿಕ್ರಂಪೂರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಇಬ್ಬರು ಶಿಕ್ಷಕರಿಗೆ
“ಸುವರ್ಣ ಕರ್ನಾಟಕ ಶಿಕ್ಷಣ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮುಖ್ಯೋಪಾಧ್ಯಾಯ ಎಸ್ ಎ ಚೌಗಲಾ ಹಾಗೂ ಶಿಕ್ಷಕ ಎಸ್ ಎಸ್ ಮುಗಳಖೋಡ ಅವರು ಪ್ರಶಸ್ತಿಗೆ ಭಾಜನರಾದ ಶಿಕ್ಷಕರಾಗಿದ್ದಾರೆ.
ಸೋಮವಾರ ಆ ಇಬ್ಬರೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ
ಶಾಲೆಯ ಎಸ್ ಡಿ ಎಂ ಸಿ ಸಮಿತಿ ಹಾಗೂ ಗುರು ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ. ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ ಸರ್ಕಾರಿ ಶಾಲೆ ಎಂದರೆ ಖಾಸಗಿ ಶಾಲೆಗಳಿಗೆ ಏನು ಕಮ್ಮಿ ಇಲ್ಲ. ಇಂದು ನಮ್ಮ ಶಾಲೆಯ ಇಬ್ಬರು ಶಿಕ್ಷಕರಿಗೆ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಮುಂದಿನ ದಿನಮಾನಗಳಲ್ಲಿ ಇಂತಹ ಪ್ರಶಸ್ತಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಿಗೆ ಲಭಿಸಲಿ ಎಂದರು.
ಈ ವೇಳೆ ಶಾಲೆಯ ಎಸ್ ಡಿ ಎಂ ಸಿ ಹಾಗೂ ಗುರು ಬಳಗದಿಂದ ಸನ್ಮಾನ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಶಾಂತಪ್ಪ ಅಣ್ಣಪ್ಪ ಜೌಗಲಾ ಮಾತನಾಡಿ ಶಿಕ್ಷಕನಾಗಿ ನಾನು ಸಲ್ಲಿಸಿರುವ ಪ್ರಾಮಾಣಿಕ ಸೇವೆಯನ್ನು ಮನಗಂಡು ಹಲವಾರು ಸಂಘ ಸಂಸ್ಥೆಗಳು ಹಾಗೂ ಇಲಾಖೆಯವರು ನಮ್ಮ ಸೇವೆಯನ್ನು ಗುರುತಿಸಿ ಆಗಾಗ ಸನ್ಮಾನಿಸಿ ಗೌರವಿಸಿ ಸತ್ಕರಿಸುತ್ತಿರುತ್ತಾರೆ. ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮಂತಹ ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿರುವುದು ನನಗೆ ಸಂತೋಷ ವೆನಿಸುತ್ತದೆ. ಈ ಪ್ರಶಸ್ತಿಯು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಮುಂದಿನ ದಿನಮಾನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಗೀತಾ ಕುಂಬಾರ. ಡಿ ಎ ಬರಡಗಿ. ವಿ ಎಸ್ ವಾಗಮ್ಮೂಡೆ. ಲಕ್ಷ್ಮಿ ನೀಡೊಣಿ. ಎಫ್ ಎಂ ಕೊರಬು. ಡಿ ಎಂ ಗೋಟಖಿಂಡಿ. ಎಸ್ ಎಸ್ ಸಿಮಾಣಿ ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ರಾಜು ಡಾಲೆ ಸೇರಿದಂತೆ ಶಾಲೆಯ ಇನ್ನಿತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


