ರಾಜ್ಯ ಮಟ್ಟದ ಕವಿಗೋಷ್ಠಿಗೆ ಮಲ್ಲಪ್ಪ ಚಾಯಪ್ಪಗೋಳ ಆಯ್ಕೆ

Ravi Talawar
ರಾಜ್ಯ ಮಟ್ಟದ ಕವಿಗೋಷ್ಠಿಗೆ ಮಲ್ಲಪ್ಪ ಚಾಯಪ್ಪಗೋಳ ಆಯ್ಕೆ
WhatsApp Group Join Now
Telegram Group Join Now
ಯಾದವಾಡ- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ಚಂದರಗಿ ಹೋಬಳಿಯ ಕುನ್ನಾಳ ಗ್ರಾಮದ ಗಣ್ಯ ಮನೆತನದ ಈಗ ಮೂಡಲಗಿ ತಾಲ್ಲೂಕಿನ ಗುಲಗಂಜಿಕೊಪ್ಪ  ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ  ಶಾಲೆಯ  ಶಿಕ್ಷಕ, ಬರಹಗಾರ,ಸಂಘಟಕ,ಪ್ರವಚನಕಾರ, ವಾಗ್ಮಿ ಮಲ್ಲಪ್ಪ ಈರಪ್ಪ ಚಾಯಪ್ಪಗೋಳ
ಅವರು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ 23ರಂದು ಬೆಂಗಳೂರು ಕೇಂದ್ರ ಬಸವ ಸಮಿತಿಯಿಂದ ಬೈಲಹೊಂಗಲ ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ  ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆಂದು  ರಾಜ್ಯ ಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.
ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಮಲ್ಲಪ್ಪ ಈರಪ್ಪ  ಚಾಯಪ್ಪಗೋಳ ವೃತ್ತಿಯಲ್ಲಿ  ಶಿಕ್ಷಕರಾದರು ಕನ್ನಡ ಸಾಹಿತ್ಯದ ಅಪಾರ ಒಲವು ಹೊಂದಿದ್ದಾರೆ. ಕಥೆ,ಕವನ,ಶಾಲಾ ಗೀತೆ ಮತ್ತು ಚುಟುಕುಗಳನ್ನು ಬರೆದಿದ್ದಾರೆ.ಉತ್ತಮ ವಾಗ್ಮಿಯೂ ಆಗಿರುವ ಮಲ್ಲಪ್ಪ ಈರಪ್ಪ ಚಾಯಪ್ಪಗೋಳ ರವರು
 ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ,ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರು ಆಗಿ ಕನ್ನಡದ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಶಿಕ್ಷಕರಾದ ಮಲ್ಲಪ್ಪ ಈರಪ್ಪ ಚಾಯಪ್ಪಗೋಳ ಅವರನ್ನು
 ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ  ಮೋಹನ ಬಸನಗೌಡ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಡಲಗಿ ತಾಲ್ಲೂಕಿನ ಅಧ್ಯಕ್ಷರಾದ ಡಾ. ಸಂಜಯ ಅಪ್ಪಯ್ಯ ಶಿಂದಿಹಟ್ಟಿ , ಗುಲಗಂಜಿಕೊಪ್ಪ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಮಂಡಳಿಯ  ಅಧ್ಯಕ್ಷರಾದ ವೆಂಕಪ್ಪ ಆರೇನಾಡ,ಉಪಾಧ್ಯಕ್ಷರಾದ ಪರಸಪ್ಪ ಗುಡದಣ್ಣವರ,ಸದಸ್ಯರಾದ ವಿಠ್ಠಲ ಹಾವನ್ನವರ, ಹನುಮಂತಪ್ಪ ದೊಡ್ಡಸಿದ್ದಪ್ಪ ದುರಗಣ್ಣವರ, ಪರಯ್ಯ  ಹಿರೇಮಠ, ವಿಠ್ಠಲ  ಮಳ್ಳಿ, ಯಲ್ಲಪ್ಪ  ಕರವಣ್ಣವರ, ಲಗಮಪ್ಪ  ಮಹಾಲಿಂಗಪುರ, ಮಹೇಶ  ಚನ್ನಾಳ, ಪದ್ಮಾವತಿ  ಗೌಡರ, ರಾಜೇಶ್ವರಿ  ಎಮ್ಮಿ, ಲಕ್ಷ್ಮೀ  ಹಾವನ್ನವರ,. ಲಕ್ಷ್ಮೀ  ಹೊಸಮನಿ, . ರೇಣುಕಾ  ಹಾವನ್ನವರ, ರಾಜಶ್ರೀ  ಆರೇನಾಡ, ಮಾಯವ್ವ  ದುರಗಣ್ಣವರ, ಲಕ್ಷ್ಮೀ  ಗಾಜಿ, ಶಾಂತಾ ಚಿಮ್ಮಡ, ಹಾಗೂ ಶಿಕ್ಷಕರಾದ ರಾಜಶೇಖರ ಇಟ್ಟಣ್ಣವರ,ಶ್ರೀಶೈಲ ತುಬಚಿ,  ಅಪ್ಸಾನ ಮೇಡಂ ವಿಜಯಕುಮಾರ ಗೌಡರ , ರಾಮಪ್ಪ  ಕಟಗಾವಲಿ ಹಾಗು ರಾಮದುರ್ಗ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ
 ಶಿವಾನಂದ ಈರಪ್ಪ ಚಾಯಪ್ಪಗೋಳ ಹಾಗು ಗುಲಗಂಜಿಕೊಪ್ಪ, ಕುನ್ನಾಳ, ಯಾದವಾಡ ಗ್ರಾಮಗಳ ಹಿರಿಯರು ಶುಭ ಕೋರಿದ್ದಾರೆ.
WhatsApp Group Join Now
Telegram Group Join Now
Share This Article