ನಾಯಕತ್ವ ಗೊಂದಲ ಬಗ್ಗೆ ವರಿಷ್ಠರು ಸ್ಪಷ್ಟ ಪಡಿಸಿದರೆ ಒಳ್ಳೆಯದು: ಸಚಿವ ಸತೀಶ್‌ ಜಾರಕಿಹೊಳಿ  

Ravi Talawar
ನಾಯಕತ್ವ ಗೊಂದಲ ಬಗ್ಗೆ ವರಿಷ್ಠರು ಸ್ಪಷ್ಟ ಪಡಿಸಿದರೆ ಒಳ್ಳೆಯದು: ಸಚಿವ ಸತೀಶ್‌ ಜಾರಕಿಹೊಳಿ  
WhatsApp Group Join Now
Telegram Group Join Now
ಬೆಳಗಾವಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನುಮಣ್ಣವರ ಕೆಎಸ್‌ಆರ್‌ಟಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಷ್ಟೇ  ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.
ಕುವೆಂಪು ನಗರದ ಸ್ವಗೃಹದಲ್ಲಿ ದೆಹಲಿ ಪ್ರವಾಸದಲ್ಲಿ ರಣದೀಪ್‌ ಸಿಂಗ್‌ ಸುರ್ಜೇವಾಲ ಭೇಟಿ ಬಗ್ಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯೂ ನಮ್ಮ ಕೈಯಲ್ಲಿ ಇಲ್ಲ. ಇಂತಹ ವಿಷಯಗಳಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಇನ್ನು ನಾಯಕತ್ವ ಗೊಂದಲ ಬಗ್ಗೆಯೂ ಗಮನಿಸುತ್ತಿದ್ದಾರೆ. ಈ ಕುರಿತು ಅವರೇ ಸ್ಪಷ್ಟ ಪಡಿಸಿದರೆ ಒಳ್ಳೆಯದು ಎಂದರು.
ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆಂಬ ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ 6 ಕೋಟಿ ಜನ ಸಂಖ್ಯೆ ಇದೆ. ಚರ್ಚೆ ಆಗುವುದು ಸ್ವಾಭಾವಿಕ. ಚರ್ಚೆಗೆ ಯಾವುದೇ ಕಡಿವಾಣವಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಷಯ ಹೈಕಮಾಂಡ್‌ ಗೆ ಬಿಟ್ಟದು ಎಂದು ಹೇಳಿದರು.
ಇನ್ನು ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 28 ಜಿಂಕೆಗಳು ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ ಸಚಿವರು, ಮೃಗಾಲಯದಲ್ಲಿ 28 ಜಿಂಕೆಗಳು ಸಾವನ್ನಪ್ಪಿರುವ ಬಗ್ಗೆ ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ. ಯಾವ ಕಾರಣಕ್ಕೆ ಜಿಂಕೆಗಳು ಸಾವನ್ನಪ್ಪಿವೆ ಎಂಬ ಕುರಿತು ತನಿಖೆ ಆದ ಬಳಿಕ ನಿಜಾಂಶ ತಿಳಿಯಲಿದೆ ಎಂದರು.
ಬಿಹಾರ ಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಆಶಯ ಇತ್ತು. ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಇನ್ನು ಇವಿಎಂ ಬಗ್ಗೆ ಅನುಮಾನ ಇದ್ದೇ ಇದೆ. ಇವಿಎಂ ಬಗ್ಗೆ ಕೊನೆವರೆಗೂ ಅನುಮಾನ ಇದ್ದೇ ಇರುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ, ಚುನಾವಣೆ ಆಯೋಗ ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದ ಸಚಿವರು, ಬಿಹಾರ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲ್ಲ ಎಂದರು.
WhatsApp Group Join Now
Telegram Group Join Now
Share This Article