ಹನಗುಂದ: ಮರಳು ಮತ್ತು ಗಣಿಗಾರಿಕೆ ವಿ?ಯಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ದೂರಿನ ಆಧಾರದ ಮೇಲೆ ಬಾಗಲಕೋಟ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಮತ್ತು ಸಿಪಿಐ ಬಸವರಾಜ ಮೂಕರ್ತಿಹಾಳ ನೇತೃತ್ವದ ಲೋಕಾಯುಕ್ತ ತಂಡ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ತಹಶೀಲ್ದಾರ ಕಚೇರಿಗೆ ದಿಢೀರ ಭೇಟಿ ನೀಡಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಮರಳು ಮತ್ತು ಗಣಿಗಾರಿಕೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸುವ ಕಾರ್ಯ ನಡೆಯಿತು.
ಮರಳು ಮತ್ತು ಗಣಿಗಾರಿಕೆಗೆ ಸಂಬಂಧಪಟ್ಟ ಅನೇಕ ಫೈಲ್‌ಗಳನ್ನು ತರಿಸಿ ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಯ ಪ್ರಕರಣಗಳ ಸಂಖ್ಯೆ ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಕಳಸಲ್ಪಟ್ಟ ಕಡತಗಳನ್ನು ಸುದೀರ್ಘವಾಗಿ ಪರಶೀಲಿಸಿದರು. ಜೊತೆಗೆ ಮರಳು ಮತ್ತು ಗಣಿಗಾರಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕುವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

