ಯರಗಟ್ಟಿ : ಸಮೀಪದ ಸತ್ತಿಗೇರಿ ಗ್ರಾಮದ ಮಳಿಮಲ್ಲೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ನಿಮಿತ್ಯ ಸಹಕಾರ ಸಂಘದ ಸಂಸ್ಥಾಪಕ ಸಿದ್ದನಗೌಡ ಸಣ್ಣರಾಮನಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಹಕಾರ ಸಪ್ತಾಹ ಧ್ವಜಾರೋಹಣ ನೆರವೇರಿಸಿದರು.
ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ ಸಿದ್ದನಗೌಡ ಸಣ್ಣರಾಮನಗೌಡ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಇವರನ್ನು ನಮ್ಮ ದೇಶದ ಸಹಕಾರ ಚಳುವಳಿಯ ಪ್ರವರ್ತಕರು ಎಂದು ಪರಿಗಣಿಸಲಾಗುತ್ತದೆ. ಸಹಕಾರ ಸಂಘಗಳಿ ಸಂಬಂಧಿಸಿದಂತೆ, ಮೈಸೂರು ಸಹಕಾರ ಸಂಘಗಳ ಕಾಯಿದೆ ೧೯೫೯ ನಮ್ಮ ರಾಜ್ಯದ ಮೊದಲ ಶಾಸನ ಮತ್ತು ೨೫-೦೫-೧೯೬೦ ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ಕರ್ನಾಟಕ, ಭಾರತದ ಸಹಕಾರ ಚಳುವಳಿಯಲ್ಲಿ ಮೂರನೇ ಸ್ಥಾನದಲ್ಲಿಇತ್ತು
ಸ್ವತಂತ್ರ ಭಾರತದ ಅಭ್ಯುದಯಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಭಾರತದ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಸಹಕಾರ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದರು. ಆ ಕಾರಣಕ್ಕಾಗಿ ಅವರ ಜನ್ಮ ದಿನದಂದು ಪ್ರಾರಂಭಿಸಿ ಒಂದು ವಾರಗಳ ಕಾಲ ರಾಷ್ಟ್ರೀಯ ಸಹಕಾರ ಸಪ್ತಾಹ (ನವೆಂಬರ್ ೧೪೨೦) ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಬಸಯ್ಯ ಸಾಲಿಮಠ, ಗುರಪಾದಪ್ಪ ಪಾಟೀಲ, ಬಂಗಾರೆಪ್ಪ ಹರಳ, ಗುರಪಾದಪ್ಪ ಗೋಡಿ, ಇಬ್ರಾಹಿಂಸಾಬ ಮುಲ್ಲಾ, ಈರಣ್ಣಾ ವಾಲಿ, ಬಸಪ್ಪ ಮುನ್ಯಾಳ, ಶ್ರೀಶೈಲ ಸವದತ್ತಿ, ದುರಗಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


