ಜಮಖಂಡಿ; ರಾಜ ಮಹಾರಾಜರ ಕಾಲದಿಂದಲೂ ಕೇಂದ್ರಬಿಂದುವಾದ ಸಾಮ್ರಾಟ್ ಅಶೋಕ್ ಸರ್ಕಲ್ ಶಾಂತಿ ಪ್ರತ್ಯೇಕ ಹಾಗೂ ಸಂಕೇತವಾಗಿದ್ದು ಇತ್ತೀಚಿಗೆ ಯಾವುದೋ ಒಂದು ವಾಹನದಿಂದ ಧ್ವಂಸಗೊಂಡಿರುತ್ತದೆ ಸಾರ್ವಜನಿಕರು ವಯೋವೃದ್ಧರು ಮತ್ತು ಶಾಲಾ ಮಕ್ಕಳು ಸಂಚರಿಸುವಾಗ ಬಿದ್ದು ಜೀವ ಹಾನಿ ಆಗುವ ಸಂಭವ ಇರುತ್ತದೆ ಆದ್ದರಿಂದ ಸದರಿ ಸರ್ಕಲ್ ಅನ್ನು ಒಳ್ಳೆಯ ಮತ್ತು ಅನುಭವಿಕ ಶಿಲ್ಪ ಕಾರರಿಂದ ಕೆಂಪು ಕಲ್ಲಿನಲ್ಲಿ ನಿರ್ಮಿಸಿದರೆ ನಗರದ ಸೌಂದರ್ಯೀಕರಣ ಹೆಚ್ಚಾಗುತ್ತದೆ.
ಜಮಖಂಡಿ ನಗರದ ಕೇಂದ್ರ ಸ್ಥಾನದಲ್ಲಿರುವ ಸಾಮ್ರಾಟ್ ಅಶೋಕ್ ಸರ್ಕಲನ್ನು ಕೆಂಪು ಕಲ್ಲಿನಲ್ಲಿ ಹೊಸದಾಗಿ ನಿರ್ಮಿಸಿ ಸುಂದರವಾಗಿ ಕಾಣುವಂತೆ ನಿರ್ಮಿಸಬೇಕೆಂದು ಜಮಖಂಡಿಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಜು ತೆಳಗಿಹಾಳ, ಪ್ರದೀಪ್ ಸಿಂಗಾರಿ, ಸಂತೋಷ್ ಮನೆ, ರಾಜು ಇಂಗಳಗಾವಿಮಠ, ನರೇಂದ್ರ ಮಾನೆ, ಹಾಗೂ ಇನ್ನೂ ಅನೇಕರು ಇದ್ದರು


