ಜಸ್ಟ್‌ ಪಿಯು ಪಾಸಾದ ಮೈಥಿಲಿ ದೇಶದ ಕಿರಿಯ ಶಾಸಕಿ

Ravi Talawar
ಜಸ್ಟ್‌ ಪಿಯು ಪಾಸಾದ ಮೈಥಿಲಿ ದೇಶದ ಕಿರಿಯ ಶಾಸಕಿ
WhatsApp Group Join Now
Telegram Group Join Now

ನವದೆಹಲಿ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ ನೇತೃತ್ವದ ಎನ್​ಡಿಎ ಭರ್ಜರಿ ಗೆಲುವು ಕಂಡಿದೆ. ಬಿಹಾರದಲ್ಲಿ ಐತಿಹಾಸಿಕ ಜಯ ಕಂಡಿರುವ ಬಿಜೆಪಿ ಬಿಹಾರದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ಬಿಜೆಪಿ ಬೇರೆಲ್ಲ ರಾಜ್ಯಗಳಲ್ಲಿ ಮಾಡಿದ ರೀತಿಯಲ್ಲೇ ಬಿಹಾರದಲ್ಲೂ ಟಿಕೆಟ್ ಘೋಷಣೆ ವೇಳೆ ಹಲವು ಪ್ರಯೋಗಗಳನ್ನು ಮಾಡಿತ್ತು. ಅದರಲ್ಲಿ ಬಿಹಾರದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಯುವತಿಯನ್ನು ಕಣಕ್ಕೆ ಇಳಿಸಿದ್ದು ಕೂಡ ಒಂದು.

ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದ ಮೈಥಿಲಿ ಠಾಕೂರ್​​ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ? ಎಂಬ ಅನುಮಾನವಂತೂ ಇದ್ದೇ ಇತ್ತು. ಇದೀಗ ಅದೇ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಿಯುಸಿ ಓದಿರುವ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರಿಗೆ ಕೇವಲ 25 ವರ್ಷ. ಮೈಥಿಲಿ ದರ್ಭಂಗಾದ ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದೀಗ ಅವರು 12 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

WhatsApp Group Join Now
Telegram Group Join Now
Share This Article