ಬೆಳಗಾವಿ. ಪ್ರತಿಷ್ಠಿತ ಬಿಹಾರ ರಾಜ್ಯದಲ್ಲಿ 243 ಕ್ಷೇತ್ರಗಳ ವಿಧಾನ ಸಭೆ ಚುನಾವಣೆಯಲ್ಲಿ 204 ಸ್ಥಾನಗಳನ್ನು ಪ್ರಧಾನಿ ಮೋದಿಜೀ ಹಾಗೂ ಬಿಹಾರ ಸಿ ಎಮ್ ನಿತೀಶ್ ಕುಮಾರ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾದಿಸಿ ಕಾಂಗ್ರೆಸ್ ಹಾಗೂ ಮಹಾ ಘಟಬಂಧನ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ್ದು ಈಗ ಕಾಂಗ್ರೇಸ್ ಪಕ್ಷದ ಪರಿಸ್ಥಿತಿ ಐಸಿಯು ನಲ್ಲಿ ಇದೆ ಮತ್ತು 2028 ರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಹಾರ ರಾಜ್ಯದ ಕಾಂಗ್ರೆಸ್ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಆಗಲಿದೆ ಎಂದು ಬೆಳಗಾವಿ ಮಹಾನಗರ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹೇಳಿದರು.
ಅವರು ಶುಕ್ರವಾರದಂದು ಬಿಹಾರ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆ ಫಲಿತಾಂಶದಲ್ಲಿ ಎನ್ ಡಿ ಎ ಮೈತ್ರಿಕೂಟ ಅಮೋಘ ಜಯ ಸಾದಿಸಿದ ಪ್ರಯುಕ್ತ ಮಹಾನಗರ ಬಿಜೆಪಿ ಘಟಕ ವತಿಯಿಂದ ಸಂಭ್ರಮಾಚರಣೆ ವೇಳೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಆಚರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಭಾಜಪಾ ಹಿರಿಯ ಮುಖಂಡ ರಮೇಶ ದೇಶಪಾಂಡೆ, ಕುಮಾರಿ ಉಜ್ವಲ ಬಡವನಾಚೆ, ವಿಜಯ ಕೊಡಗನೂರು, ಮುರುಘೇoದ್ರಗೌಡ ಪಾಟೀಲ ಸೇರಿದಂತೆ ಪ್ರಮುಖ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


