ಹಸಿರು ಕ್ರಾಂತಿ: ಎಂ.ಕೆ.ಹುಬ್ಬಳ್ಳಿ: ಬೆಳಗಾವಿ ಜಿಲ್ಲಾಡಾಳಿತ ಹಾಗೂ ಪಟ್ಟಣ ಪಂಚಾಯತ ಇವರ ಸಹಯೋಗದಲ್ಲಿ ಬುಧವಾರ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ಜರುಗಿತು.ಚ.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ ಕೂಲಿ ಕಾರ್ಮಿಕರಿಗೆ, ಮಧ್ಯಮ ವರ್ಗದ ಜನರಿಗೆ ಹಾಗೂ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ದೊರೆಯಲಿ ಎಂದು ರಾಜ್ಯ ಸರಕಾರ ಈ ಯೋಜನೆ ಜಾರಿಗೆ ತಂದಿದೆ. ಪಟ್ಟಣದ ಸುತ್ತ ಮುತ್ತ ಇರುವ ಗ್ರಾಮಗಳಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ಆಗಮಿಸು ಅನೇಕ ವಿಧ್ಯಾರ್ಥಿಗಳು ಮುಂಜಾನೆ ಬರುವಾಗ ಊಟದ ಭುತ್ತಿತರುವುದಿಲ್ಲ ಅತಂಹ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗುವುದು ಎಂದ ಅವರು ಕ್ಯಾಂಟೀನ್ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಪಟ್ಟಣದ ಸ್ವಚ್ಚತೆ ಕಾಪಾಡಿಕೊಳ್ಳುವುದು ಕೇವಲ ಪಟ್ಟಣ ಪಂಚಾಯತಿಯವರಿಗೆ ಮಾತ್ರ ಸಿಮೀತವಾಗಿಲ್ಲ ಇದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು. ಇದೇ ವೇಳೆ ಗಾಂಧಿ ನಗರದಲ್ಲಿ ನೂತನಾವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಹಾಗೂ ಸಣ್ಣ ಅಗಸಿಯಲ್ಲಿ ಇರುವ ನಮ್ಮ ಕ್ಲಿನಿಕನ್ನು ಶಾಸಕರು ಉದ್ಘಾಟಿಸಿದರು.
ಈ ವೇಳೆ ಪಟ್ಟಣ ಪಂಚಾಯತ ಅಧ್ಯಕ್ಷ ಪ್ರಕಾಶ ಕೊಡ್ಲಿ, ಉಪಾಧ್ಯಕ್ಷ ಮಂಜುನಾಥ ಕಡಕೋಳ, ದೇಮಪ್ಪ ಬಸರಗಿ, ಗದಿಗೆವ್ವಾ ಜಂಗಳಿ, ದೊಡ್ಡಪ್ಪ ಗಣಾಚಾರಿ, ಪ್ರಕಾಶ ಗಿರಜಿಮನಿ, ಲಕ್ಷ್ಮಿ ನಾಗನೂರ, ಸುರೇಶ ಮುತ್ನಾಳ, ಸಾವಿತ್ರಿ ಹೊನ್ನಣ್ಣವರ, ಸುಶೀಲಾ ಗಣಾಚಾರಿ, ಸುಭಾನಿ ಅಗಸಿಬಾಗಿಲ, ಪರವಿನ ನಬುವಾಲೆ, ಸಮೀರ ಪಟೇಲ, ಮಂಗಳಾ ದೇಮಟ್ಟಿ, ಡಿಯುಡಿಸಿ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಮುಖ್ಯಾಧಿಕಾರಿ ರವಿ ಮಾಸ್ತಿಹೊಳಿಮಠ, ಅಭಿಯಂತರ ಎಸ್.ಆಯ್.ಚೌಗಲಾ, ಎ.ಎಸ್.ಶೆಟ್ಟರ, ಕವಿತಾ ನಾಗನೂರ, ಲಕ್ಷ್ಮಣ ದೇಮಟ್ಟಿ, ಮಲ್ಲಿಕಾರ್ಜುನ ತಿಗಡಿ, ಆಕಾಶ ರಾವಳ. ಗಿರೀಶ ಅವಳೆ, ನಾಗರಿಕರಾದ ಪಕ್ಕೀರಪ್ಪ ಸಕ್ರೆಣ್ಣವರ, ಶಂಕರ ಕಿಲ್ಲೇದಾರ, ಮಹಾಂತೇಶ ಗಣಾಚಾರಿ ಸೇರಿದಂತೆ ಅನೇಕರು ಇದ್ದರು.


