ಗಿಡುಗ … ಹೀಗೊಂದು ಅಣ್ಣ-ತಂಗಿ ಕಥೆಯ ಚಿತ್ರ 

Ravi Talawar
ಗಿಡುಗ … ಹೀಗೊಂದು ಅಣ್ಣ-ತಂಗಿ ಕಥೆಯ ಚಿತ್ರ 
WhatsApp Group Join Now
Telegram Group Join Now
      ಶ್ರೀ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ‘ಗಿಡುಗ” ಸಿನಿಮಾಕ್ಕೆ ’ರಾಜ ರಾಣಿ ರೋರರ್ ರಾಕೆಟ್’ ಖ್ಯಾತಿಯ ಕೆಂಪೆಗೌಡ ಮಾಗಡಿ ಇವರು ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಜತೆಗೆ ಬಂಡವಾಳ ಹೂಡಿದ್ದಾರೆ.
     ಸಂಕರ ನಾರಾಯಣ ನಂಬುದಿರಿ ಮತ್ತು ವಿ.ಎ.ರತೀಶ್ ಹುದಿಕೇರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ದ ಹಂಟರ್’ ಎಂಬ ಅಡಿಬರಹವಿದೆ.
      ಅಣ್ಣ ತಂಗಿ ಕಥೆಯಳ್ಳ ಚಿತ್ರ ಇದಾಗಿದ್ದು, ಸೆಸ್ಪೆನ್ಸ್, ಮರ್ಡರ್ ಮಿಸ್ಟರಿ ಅಂಶಗಳನ್ನು ಒಳಗೊಂಡಿರುವುದರಿಂದ ನಿರ್ದೇಶಕರು ಚಿತ್ರದ ಸಾರಾಂಶವನ್ನು ಗೌಪ್ಯವಾಗಿಟ್ಟಿದ್ದಾರೆ.
       ರತೀಶ್ ಕೂರ್ಗ್ ನಾಯಕ. ತಂಗಿಯಾಗಿ ಭವಾನಿ, ಉಳಿದಂತೆ ಭಾನು, ಮೋಹನ್, ಚಾಮರಾಜು, ರೇವಣ್ಣ ಮಾಗಡಿ, ಚೆನ್ನಬಸವ, ಕಿಶೋರ್, ಸಂಜೀವ್, ಮಾಸ್ಟರ್ ಹೃದಯನ್ ಗೌಡ, ಮಾಸ್ಟರ್ ಪುನೀತ್ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ವಿನ್ಸೆಂಟ್ ಮುಕೇಶ್  ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೀಪು ಅರಸಿಕೆರೆ-ಸಂಗಮೇಶ್-ರವಿ, ಸಂಕಲನ ಆದಿ ಆದರ್ಶ್, ಸಾಹಸ ಮಾರುತಿ ಮಾಗಡಿ ಅವರದಾಗಿದೆ.   ಬೆಂಗಳೂರು, ಮಾಗಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿತರಕ ರಾಮಚಂದ್ರ ಕುಲಕರ್ಣಿ ಮುಖಾಂತರ ’ಗಿಡುಗ’ ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
WhatsApp Group Join Now
Telegram Group Join Now
Share This Article